ಕಾಸರಗೋಡು: ಬದಿಯಡ್ಕ ನೆಕ್ರಾಜೆ ಸನಿಹದ ಆಲಂಕೂಡ್ಲಿನಲ್ಲಿ ರಬ್ಬರ್ ಶೀಟ್ ನಿರ್ಮಾಣ ಘಟಕಕ್ಕೆ ಬೆಂಕಿ ತಗುಲಿದ ಪರಿಣಾಮ ನಷ್ಟ ಉಂಟಾಗಿದೆ. ಲಕ್ಷ್ಮೀಶ ಬಳ್ಳುಳ್ಳಾಯ ಎಂಬುವರ ಮನೆ ಸನಿಹ ಚಟುವಟಿಕೆ ನಡೆಸುತ್ತಿದ್ದ ಘಟಕದಲ್ಲಿ ಬೆಂಕಿ ಉಂಟಾಗಿದ್ದು, ರಬ್ಬರ್ ಶೀಟ್, ಬಾಗಿಲು ಮತ್ತಿತರ ಸಾಮಗ್ರಿಗಳು ಹಾನಿಗೀಡಾಗಿ 2 ಲಕ್ಷ ರೂ.ನಷ್ಟ ಸಂಭವಿಸಿದೆ. ಕಾಸರಗೋಡು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ಶಮನಗೊಳಿಸಿ, ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ. ಘಟಕಕ್ಕೆ ತಲುಪಲು ಸೂಕ್ತ ರಸ್ತೆ ಸೌಕರ್ಯವಿಲ್ಲದಿರುವುದರಿಂದ ಅಗ್ನಿಶಾಮಕ ದಳದ ವಾಹನ ಸಂಚಾರಕ್ಕೂ ತೊಡಕಾಗಿ ಪರಿಣಮಿಸಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

