Breaking News

ದಾವಣಗೆರೆಯಲ್ಲಿ ಪ್ರೀತಿಸಿ ಮದ್ವೆಯಾದ ಜೋಡಿಯ ಹತ್ಯೆಗೆ ಯತ್ನ : ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ!

ದಾವಣಗೆರೆ ಜಿಲ್ಲೆಯ ಬಸವಪಟ್ಟಣ ಪೊಲೀಸ್ ಠಾಣೆ ಆವರಣದಲ್ಲೇ ಪ್ರೀತಿಸಿ ಮದುವೆಯಾದ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ದಾಳಿಯಲ್ಲಿ ಕಂಚುಗಾರನಹಳ್ಳಿ ನಿವಾಸಿ 22 ವರ್ಷದ ಸಿದ್ದೇಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದೇಶ್ ಹಾಗೂ ದಾಗಿನಕಟ್ಟಿ ಗ್ರಾಮದ ಲೀಲಾವತಿ ಇತ್ತೀಚೆಗೆ ಪ್ರೀತಿಸಿ ಮದುವೆಯಾಗಿದ್ದರು. ಜೀವ ಬೆದರಿಕೆ ಹಿನ್ನೆಲೆಯಲ್ಲಿ ಎಸ್‌ಪಿ ಕಚೇರಿಗೆ ದೂರು ನೀಡಿದ್ದ ನವಜೋಡಿ, ಪೊಲೀಸರ ಸೂಚನೆಯಂತೆ ಬಸವಪಟ್ಟಣ ಠಾಣೆಗೆ ಬಂದಿದ್ದರು. ಈ ವೇಳೆ ಹುಡುಗಿಯ ಸಂಬಂಧಿಕರಾದ ನಾಗರಾಜ ಹಾಗೂ ಇತರರು ಠಾಣೆ ಆವರಣದಲ್ಲೇ ಸಿದ್ದೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಕೊಲ್ಲೂರಿನಲ್ಲಿ 80 ಸಾವಿರ ರೂ. ಕಳವು: 24 ಗಂಟೆಯೊಳಗೆ ಮೂವರು ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು …

Leave a Reply

Your email address will not be published. Required fields are marked *