ಶೀಲ ಶಂಕಿಸಿ ಪತ್ನಿಗೆ ಹಲ್ಲೆ ನಡೆಸಿ ಕೊಲೆ ಮಾಡಿದ ಚಾಲಕನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪಾವಗಡ ಮೂಲದ ಅಮೃತಹಳ್ಳಿಯ ಗಂಗಮ್ಮ ಬಡಾವಣೆ ನಿವಾಸಿ ಅಂಜಲಿ (20) ಕೊಲೆಯಾದವರು. ಈಕೆಯ ಪತಿ ಸುರಪುರ ಮೂಲದ ರವಿಚಂದ್ರ ಬಂಧಿತ ಆರೋಪಿ. ಕೊಲೆಯಾದ ಅಂಜಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ, ಆರೋಪಿ ರವಿಚಂದ್ರ ಟ್ರಾವೆಲ್ಸ್ ಕಚೇರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.ಅಂಜಲಿ ಬೇರೆ ವ್ಯಕ್ತಿ ಜೊತೆಗೆ ಆತ್ಮೀಯವಾಗಿ ಇದ್ದಾಗ ರವಿಚಂದ್ರನ ಕೈಗೆ ಸಿಕ್ಕಿ ಬಿದ್ದಿದ್ದಾಳೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ರವಿಚಂದ್ರ ಕೈಯಿಂದ ಗುದ್ದಿ ಹೊಡೆದು ಕೊಲೆ ಮಾಡಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

