Breaking News

57 ಕೇಸ್‌ಗೆ 14,250 ರೂ.ದಂಡ ಪಾವತಿ ಮಾಡಿದ ದ್ವಿಚಕ್ರ ವಾಹನ ಸವಾರ….

ಹುಬ್ಬಳ್ಳಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ವಾಹನ ಚಾಲಕರು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದಂತ ಇ- ಚಲನ್ ಮೇಲೆ ನೀಡಿದ 50% ರಿಯಾಯಿತಿ ಅವಕಾಶವನ್ನು ಸದುಪಯೋಗ ಪಡೆಸುಕೊಳ್ಳುತ್ತಿದ್ದು, ವಾಹನ ಸವಾರನೊಬ್ಬ ಸ್ವ ಇಚ್ಛೆಯಿಂದ ಬಂದು 57 ಕೇಸ್ ಗೆ

ದಂಡವನ್ನು ನಗರದ ಹಳೆ ಕೋರ್ಟ್ ಸರ್ಕಲ್ ಬಳಿ ದಂಡ ಪಾವತಿ ಮಾಡಿದ್ದಾನೆ.ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಸಾರ್ವಜನಿಕರ ದಂಡ ಪಾವತಿಗೆ 50% ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಿವಾಸಿ ಸೂರಜ್ ಸಿಂಗ್ ಠಾಕೂರ್ ಎಂಬ ಯುವಕ KA 63 H 6837 ತನ್ನ ವಾಹನದ ಮೇಲೆ ಬರೊಬ್ಬರಿ 57 ಕೇಸ್‌ಗಳು ದಾಖಲಾಗಿದ್ದವು. ಸುಮಾರು 28,500 ರೂಪಾಯಿ ತಂಡವಾಗಿತ್ತು. ರಿಯಾಯಿತಿಯಾಗಿ 14,250 ರೂಪಾಯಿ

ದಂಡ ಪಾವತಿಸಿದ್ದಾನೆ.ಪೂರ್ವ ಸಂಚಾರಿ ಎಎಸ್ಐ ಬಿ.ಬಿ ಮಾಯಣ್ಣವರ ಹಾಗೂ ಶಂಭು ರೆಡ್ಡರ್, ಕುಬೇರ ಕಾರಬಾರಿ ಸಂಚಾರಿ ಪೊಲೀಸರು ನಗರದ ಹಳೆ ಕೋರ್ಟ್ ಸರ್ಕಲ್ ಬಳಿ ದಂಡ ತುಂಬಿಸಿಕೊಂಡಿದ್ದಾರೆ.ಇನ್ನು ದಂಡ ತುಂಬಲು ಇಂದು ಕೊನೆ ದಿನವಾಗಿದ್ದು ಸಾಕಷ್ಟು ವಾಹನ ಸವಾರರು ಬಂದು ತಮ್ಮ ತಮ್ಮ ವಾಹನದ ದಂಡ ತುಂಬುತ್ತಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *