ಬೆಂಗಳೂರು: ಇನ್ನು ಮುಂದೆ ಡ್ರೋನ್ ಮೂಲಕ 150 ಕೆಜಿ ಸಾಮರ್ಥ್ಯದ ವಸ್ತುಗಳನ್ನು ಸಾಗಿಸಬಹುದು.

ಹೌದು. 10, 15 ಕೆಜಿ ಸಾಮರ್ಥ್ಯ ವಸ್ತುಗಳನ್ನು ಈಗ ಸುಲಭವಾಗಿ ಸಾಗಿಸಬಹುದು. ಆದರೆ 150 ಕೆಜಿ ಸಾಮರ್ಥ್ಯದ ವಸ್ತುಗಳನ್ನು ಸಾಗಿಸಬಲ್ಲ ಡ್ರೋನ್ ತಯಾರಾಗುತ್ತಿದೆ. ಈ ಡ್ರೋನ್ ಬೆಂಗಳೂರಿನಲ್ಲೇ ತಯಾರಾಗುತ್ತಿರುವುದು ವಿಶೇಷ.
ಹೆಚ್‌ಎಲ್-15 ಎಂದು ಕರೆಯಲಾಗುತ್ತಿರುವ ಡ್ರೋನ್ ಸುಮಾರು 150 ಕೆಜಿ ತೂಕವನ್ನು ಹೊರಬಲ್ಲದು ಮಾತ್ರವಲ್ಲದೆ ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಕ್ರಮಿಸಬಲ್ಲದು. ಅಷ್ಟೇ ಅಲ್ಲದೇ ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಡ್ರೋನ್‌ಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

