ನಾನು ಮುಖ್ಯಮಂತ್ರಿ ಆಗ್ತಿನಿ ಅನ್ನೋ ಹೇಳಿಕೆ ಬಾಲಿಷ, ಈ ಹೇಳಿಕೆಗೆ ನಾನು ಉತ್ತರ ಕೊಡಲ್ಲ..ಶತಮಾನಕ್ಕೊಮ್ಮೆ ಮೋದಿ ಅಂತ ನಾಯಕರು ಸಿಗ್ತಾರೆ.ಅವರ ಕೈ ಕೆಳಗೆ ಕೆಲಸ ಮಾಡೋದು ನನ್ನ ಸೌಭಾಗ್ಯ.ಜಗತ್ತು ಮೋದಿ ಸ್ವೀಕಾರ ಮಾಡಿದೆ. ಇಂತಹ ಬಾಲಿಷ ಅಪ್ರಬುದ್ದ ಹೇಳಿಕೆಗೆ ನಾನು ಉತ್ತರ ಕೊಡಲ್ಲ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ…ಮಾಜಿ ಸಿಎಂ ಕುಮಾರಸ್ವಾಮಿ ಆರೋಪಗಳಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು,ನಾನು ನರೇಂದ್ರ ಮೋದಿ ಕೆಳಗೆ ಕೆಲಸ ಮಾಡ್ತೀದಿನಿ, ಅದರಲ್ಲಿ ಸಂತೋಷ ಇದೆ ಅಂದಾಗ ಯಾವ ಪ್ರಶ್ನೆ ಉದ್ಭವಿಸಲ್ಲ.ಕಲ್ಲಿದ್ದಲಲ್ಲಿ ನಾವು ಪ್ರಗತಿ ಸಾಧಿಸದ್ದೇವೆ .ಇನ್ನೊಂದು ವರ್ಷದಲ್ಲಿ ನಾವು ಕಲ್ಲಿದ್ದಲು ಆಮದು ನಿಲ್ಲಿಸುತ್ತೇವೆ.ಚುನಾವಣೆ ವೇಳೆ ಕಾಲೆಳೆಯೋದು ಹಕ್ಕು ಎಂದು ಭಾವಿಸುತ್ತಾರೆ.ಆದ್ರೆ ದೌರ್ಭಾಗ್ಯ ವೈಯಕ್ತಿಕ ಟೀಕೆ ಮಾಡ್ತೀದಾರೆ.ಕಾಂಗ್ರೆಸ್ ಪಾರ್ಟಿ ಮೇಲೆ ಜನ ಹೂ ಇಟ್ಟಿದ್ದಾರೆ.ಜನ ಹೂ ಇಟ್ಟಿರೋದು ನೋಡಿದ್ರೆ ಕಾಂಗ್ರೆಸ್ ಮೇಲೆ ಎದ್ದು ಬರೋಕೆ ಆಗಲ್ಲ.
ಅಷ್ಟು ಪ್ರಮಾಣದ ಹೂ ಜನ ನಿಮ್ಮ ಮೇಲೆ ಇಟ್ಟಿದ್ದಾರೆ.ಕಾಂಗ್ರೆಸ್ ದುರ್ಬಿನ್ ಹಚ್ಚಿ ಹುಡಕಿದ್ರೂ ಸಿಗಲ್ಲ.ಸ್ವಾತಂತ್ರ್ಯ ತಂದುಕೊಟ್ಟವರು ನಾವೇ ಎಂದು ಜನರ ಮೇಲೆ 25 ವರ್ಷ ಹೂ ಇಟ್ಟಿದೀರಿ.ಜನ ನಿಮ್ಮ ಮೇಲೆ ಹೂ ಇಡೋ ಮೊದಲು ನಿವೇ ಇಟ್ಕೊಂಡಿರೋದು ಸಂತೋಷ.
ಕಾಂಗ್ರೆಸ್ ಪಾರ್ಟಿ ಮೇಲೆ ಜನ ಹೂ ಇಟ್ಟಿದ್ದಾರೆ.
ಇದೀಗ ಅವರ ಪೋಸ್ಟರ್ ಮೇಲೆ ಹೂ ಇಡ್ತೀದಾರೆ.ಜನ ಇದಕ್ಕೆಲ್ಲ ಉತ್ತರ ಕೊಡ್ತಾರೆ ಎಂದರು.. ಇನ್ನೂಅಶ್ವಥ್ ನಾರಾಯಣ್ ಹೇಳಿಕೆ ನಾನು ಓದಿದ್ದೇನೆ,ಅವರು ರಾಜಕೀಯವಾಗಿ ಹೊಡಿಬೇಕು ಎಂದಿದ್ದಾರೆ.ಅವರು ವಿಷಾದ ವ್ಯಕ್ತಪಡಿಸಿದ್ದಾರೆ, ಅದು ಮುಗಿದ ಹೋಯ್ತು.
ನನ್ನ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪದ ಬಗ್ಗೆ ಈಗಲೇ ಸ್ಪಷ್ಟಪಡಿಸಿದ್ದೇನೆ.ನಾನು ಈ ಕುರಿತು ಲೀಗಲ್ ನೋಟಿಸ್ ಕೊಡ್ತೀನಿ ಎಂದಿದ್ದಾರೆ..
ಇದೇ ವೇಳೆ ನಾಡಿನ ಜನತೆಗೆ ಶಿವರಾತ್ರಿ ಶುಭಾಶಯ ಕೋರಿದ ಪ್ರಲ್ಹಾದ್ ಜೋಶಿ,
ಪರಮೇಶ್ವರ ನಮೆಗೆಲ್ಲ ಸನ್ಮಂಗಳ ಉಂಟು ಮಾಡಲಿ.ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಶಿವನ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ.ಭಾರತ ನಂಬರ್ 1 ಆಗೋದಲ್ಲಿ ಶಿವನ ಆಶೀರ್ವಾದ ಇರಲಿ.ಬೊಮ್ಮಾಯಿ ಮೋದಿ ಮಾರ್ಗವನ್ನು ಅನುಸರಿಸಿ ಬಡವರ ಸ್ನೇಹಿ,ರೈತ ಸ್ನೇಹಿ ಬಜೆಟ್ ಕೊಟ್ಟಿದ್ದಾರೆ ಅವರಿಗೆ ಧನ್ಯವಾದ ಎಂದರು..
bigtvnews | Hubli Dharwad News | Kannada News | Karnataka News Hubli News | News In Hubli | Local news





