Breaking News

73.ಸೆಂಟ್ರಲ್ ಅಖಾಡಕ್ಕೆ ಫಾರೂಕ್ ಅಬೂನವರ್ ಆಗ್ತಾರಾ ಅಧಿಪತಿ..?

ಹುಬ್ಬಳ್ಳಿಯ ಅತೀ ಪ್ರತಿಷ್ಟಿತ ಕ್ಷೇತ್ರವಾಗಿ ಮಾರ್ಪಟ್ಟಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷೆಗಳು ಹೆಚ್ಚಾಗುತ್ತಿದ್ದಾರೆ ಅದರಲ್ಲೂ ಕಾಂಗ್ರೆಸ್ ಆಕಾಂಕ್ಷಿಗಳ ಆರ್ಭಟ

ಜೊರಾಗಿದೆ..ಇದಿಗ ಅಲ್ಪಸಂಖ್ಯಾತ ನಾಯಕ ಫಾರೂಕ್ ಅಬೂನವರ್ ಈ ಸಲ ಟಿಕೆಟ್ ಗಿಟ್ಟಿಸಿಕೊಂಡು ಅಖಾಡಕ್ಕೆ ಧುಮುಕುವ ಸಿದ್ದತೆಯನ್ನು ಸಹ ನಡೆಸುತ್ತಿದ್ದಾರೆ. ಕಳೆದ 22 ವರ್ಷಗಳ ಕಾಲ ಕಾಂಗ್ರೇಸ್ ನ ಕಟ್ಟಾಳು ಆಗಿ ತಳ ಹಂತದಿಂದ ಪಕ್ಷ ಸಂಘಟನೆ ಮತ್ತು ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದಿದ್ದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.ಇನ್ನು ಬಿಗ್ ಟಿವಿ ಕನ್ನಡದೊಂದಿಗೆ ಮಾತನಾಡಿದ ಫಾರೂಕ್ ಅವರು

ಪ್ರಪ್ರಥಮ ವಾಗಿ ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ನಾನು ಸ್ಪರ್ಧೆ ಮಾಡುವೆ ನಮ್ಮ ನಾಯಕರು ಹಾಗು ಕಾಂಗ್ರೆಸ್ ನ ಹೈ ಕಮಾಂಡ್ ನನ್ನ ಕೆಲಸ ಮತ್ತು ಜನಪರ ಕಾಳಜಿಯ ಕಾರ್ಯಗಳನ್ನು ಗುರ್ತಿಸಿ ನನಗೆ ಈ ಭಾರಿ ಅವಕಾಶ ಕೊಡುತ್ತೆ ಅನ್ನುವ ಭರವಸೆಯನ್ನು ವ್ಯಕ್ತಪಡಿಸಿದರು…ಇನ್ನು ಈ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ಟಿಕೆಟ್ ಕೂಗು ಈ ಹಿಂದೆಯು ಸಹ ಕೇಳಿಬಂದಿತ್ತು ಸಾಲು ಸಾಲು ಮಿಟಿಂಗ್ ಗಳನ್ನ ಸಹ ಸಮುದಾಯದ ನಾಯಕರು ಮತ್ತು ಧಾರ್ಮಿಕ ಮುಖಂಡರು ಮಾಡಿದ್ದರು .ಅಲ್ಲಿ ಅಲ್ಪ ಸಂಖ್ಯಾತರಿಗು

ಚುನಾವಣೆಯಲ್ಲಿ ಸ್ಪರ್ಧಿಸಿ ಮುಂಚುಣೆಯಲ್ಲಿ ಬರಲು ಸಮ್ಮತಿಯನ್ನು ಸೂಚಿಸಿದ್ದರು ಆದರೆ ಇಂದು ಫಾರೂಕ್ ಅವರು ತಮಗೆ ಟಿಕೆಟ್ ನೀಡಿ ಅನ್ನೊ ಕೂಗು ಕಾಂಗ್ರೆಸ್ ನ ನಾಯಕರು ಯಾವ ರೀತಿ ಪರಿಹಾರ ನೀಡುವರು ಅನ್ನುವದೆ ಒಂದು ಕೂತುಹಲ‌ ಮೂಡಿಸಿದೆ…ಇನ್ನು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮೂಡಿಸಿ ಪ್ರತಿ ವಾರ್ಡ ಗಳ ಜನರ ನಾಡಿ ಮಿಡಿತ ಹಾಗು ಕೋವಿಡ್ ಸಮಯದಲ್ಲಿ ಜನರ ವಿಶ್ವಾಸ ಗಳಿಸಿರುವ ಫಾರೂಕ್ ಅವರಿಗೆ ಎಲ್ಲ ಧರ್ಮದ ಮುಖಂಡರು ಹಾಗು ರಾಜಕಾರಣಿಗಳ ಒಡನಾಟ ಇವರ ಪ್ರಮುಖ ಅಸ್ತ್ರ ವಾಗಿದೆ ಅಂತಲೇ ಹೇಳಬಹುದು….ಅದು ಏನೇ ಆಗಲಿ‌ ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಆಸೆಗೆ ಕಾಂಗ್ರೆಸ್ ನ ಹೈ ಕಮಾಂಡ್ ಯಾವ ತರಹದ ಪರಿಹಾರ ಮತ್ತು ಟಿಕೆಟ್ ವಂಚಿತರ ಮನವಲಿಕೆ ಮಾಡಿ ಚುನಾವಣೆ ಎದುರಿಸುತ್ತೆ ಅನ್ನುವದನ್ನ ಕಾದು ನೋಡಬೇಕಾಗಿದೆ….

Share News

About Shaikh BigTv

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *