Breaking News

ಕಳ್ಳನ ಆಟಕ್ಕೆ ಗೋಕುಲ ರೋಡ್ ಪೊಲೀಸರ ಬ್ರೇಕ್..! 20ರ ಯುವಕ ಅರೆಸ್ಟ್, 33 ಗ್ರಾಂ ಚಿನ್ನ–2 ಕೆ.ಜಿ ಬೆಳ್ಳಿ ವಶಕ್ಕೆ..!!

ಮನೆ ಕಳ್ಳತನದ ಕೇಸ್‌ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..!

ಮನೆ ಕಳ್ಳತನದ ಆಟಕ್ಕೆ ಗೋಕುಲ ರೋಡ್ ಪೊಲೀಸರ ಖಡಕ್ ಏಟು..!ಕೇಶ್ವಾಪುರದ ವಾಳ್ವೇಕರ ಪ್ಲಾಟ್‌ನಲ್ಲಿ ಕೈಚಳಕ ತೋರಿದ್ದ 20ರ ಯುವಕ ಪೊಲೀಸ್ ಬಲೆಗೆ..!

33 ಗ್ರಾಂ ಚಿನ್ನ, ಬರೋಬ್ಬರಿ 2 ಕೆ.ಜಿ ಬೆಳ್ಳಿ ವಶಕ್ಕೆ..!!

ಹುಬ್ಬಳ್ಳಿ: ಮನೆ ಬಾಗಿಲಿಗೆ ಕನ್ನ ಹಾಕಿ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ದೋಚಿದ್ದ ಆರೋಪಿಗೆ ಗೋಕುಲ ರೋಡ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಳ್ಳತನದ ಪ್ರಕರಣದ ಬೆನ್ನುಹತ್ತಿದ ಪೊಲೀಸರ ತಂಡ, 20 ವರ್ಷದ ಯುವಕನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ….

ಬಂಧಿತನನ್ನು ಅಜಯ್ ತಂದೆ ತೋಟೆಪ್ಪ ಬಂಡಿವಾಡ (20) ಎಂದು ಗುರುತಿಸಲಾಗಿದೆ. ಈತ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಾಳ್ವೇಕರ ಪ್ಲಾಟ್‌ನಲ್ಲಿ ಕಳ್ಳತನ ಮಾಡಿದ್ದ ಎನ್ನಲಾದ 33 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ ಬೆಳ್ಳಿ ವಸ್ತುಗಳನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ…

ಕಳ್ಳತನದ ಮಾಲು ಎಲ್ಲಿದೆ ಎಂಬ ಜಾಡು ಹಿಡಿದ ಪೊಲೀಸರಿಗೆ ಸಿಕ್ಕಿದ್ದು 20ರ ಯುವಕ!ನವೆಂಬರ್ 10ರಂದು ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಷಯ ಪಾರ್ಕ್ ಸಮೀಪ ಆರೋಪಿಯನ್ನು ಪತ್ತೆಹಚ್ಚಲಾಗಿದೆ. ಆತನ ಬಳಿಯಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಕಳ್ಳತನ ಪ್ರಕರಣವೊಂದನ್ನು ಭೇದಿಸುವಲ್ಲಿ ಗೋಕುಲ ರೋಡ್ ಪೊಲೀಸರು ಯಶಸ್ವಿಯಾಗಿದ್ದಾರೆ…ಕಮಿಷನರ್ ಬೊರಸೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ…

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಜಿ. ಬೊರಸೆ, ಡಿಸಿಪಿ ಶೃತಿ ಎನ್.ಎಸ್., ಎಸಿಪಿಗಳಾದ ವಿಜಯಕುಮಾರ ತಳವಾರ, ಶಿವಾನಂದ ಚಲವಾದಿ ಹಾಗೂ ಶಿವಪ್ರಕಾಶ ನಾಯ್ಕ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ….

ಗೋಕುಲ ರೋಡ್ ಪೊಲೀಸ್ ಇನ್ಸ್‌ಪೆಕ್ಟರ್ ಸಂಗಮೇಶ ದಿಡಿಗಿನಾಳ, ಪಿಎಸ್‌ಐ ಸಚಿನಕುಮಾರ ದಾಸರಡ್ಡಿ ಹಾಗೂ ಠಾಣೆಯ ಸಿಬ್ಬಂದಿ ಮತ್ತು ಸಿಸಿಬಿ ವಿಭಾಗದ ಸಿಬ್ಬಂದಿ ಒಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು…ಈ ಸಂಬಂಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 181/2026ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ…

ಒಟ್ಟಿನಲ್ಲಿ ಕಳ್ಳತನದ ಪ್ರಕರಣ ಪತ್ತೆಹಚ್ಚಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸರ ಕಾರ್ಯಾಚರಣೆ ಗಮನ ಸೆಳೆದಿದೆ.

Share News

About Shaikh BigTv

Check Also

ಮಣಿಪಾಲ: ರಸ್ತೆಯಲ್ಲೇ ಗುಂಪು ಕಟ್ಟಿ ಮಾರಾಮಾರಿ; ವೈರಲ್ ವಿಡಿಯೊ ಆಧರಿಸಿ 11 ಯುವಕರ ವಿರುದ್ಧ ಪ್ರಕರಣ ದಾಖಲು

ಮಣಿಪಾಲದ ಈಶ್ವರನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 169(A) ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಈ …

Leave a Reply

Your email address will not be published. Required fields are marked *