H1 ಡ್ರಗ್ಸ್ ಅಕ್ರಮ ದಾಸ್ತಾನು ಶಂಕೆ..! ನಕಲಿ ವೈದ್ಯರ ಮೇಲೆ ಆರೋಗ್ಯ ಇಲಾಖೆ ಕ್ರಮ ಯಾವಾಗ..?
ಹುಬ್ಬಳ್ಳಿ-ಧಾರವಾಡದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಳ..!ಅರ್ಹತೆ ಇಲ್ಲದವರು ಅಲೋಪಥಿಕ್ ಔಷಧಿ ಕೊಡುತ್ತಿದ್ದಾರಾ..? ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆಯಾ..?
ಹುಬ್ಬಳ್ಳಿ-ಧಾರವಾಡದಲ್ಲಿ ಅರ್ಹತೆ ಹಾಗೂ ವೈದ್ಯಕೀಯ ನೋಂದಣಿ ಬಗ್ಗೆ ಅನುಮಾನ ಮೂಡಿಸುವ ರೀತಿಯಲ್ಲಿ ಕೆಲವರು ಕ್ಲಿನಿಕ್ ಅಥವಾ ಆಸ್ಪತ್ರೆ ನಡೆಸಿ, ರೋಗಿಗಳಿಗೆ ಔಷಧಿ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ…

ವಿಶೇಷವಾಗಿ ಆಯುರ್ವೇದ ಪದ್ಧತಿಯಲ್ಲಿ ಅರ್ಹತೆ ಹೊಂದಿರುವ ವೈದ್ಯರು ಯಾವ ಔಷಧಿಗಳನ್ನು ಯಾವ ನಿಯಮದಡಿ ಶಿಫಾರಸು ಮಾಡಬಹುದು ಎಂಬುದು ಸ್ಪಷ್ಟವಾಗಬೇಕಿದೆ. ಆದರೆ ಅಲೋಪಥಿಕ್ ಔಷಧಿಗಳನ್ನು ನಿಯಮಬಾಹಿರವಾಗಿ ನೀಡಲಾಗುತ್ತಿದೆ ಎಂಬ ಆರೋಪಗಳು ನಿಜವೇ ಆಗಿದ್ದರೆ, ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ…
ಹಾಗಾದರೆ ಪ್ರಶ್ನೆ — ಅಲೋಪಥಿಕ್ ಔಷಧಿ ನೀಡಲು ಇವರಿಗೆ ಯಾವ ಕಾನೂನುಬದ್ಧ ಅಧಿಕಾರವಿದೆ..?

ಮೆಡಿಕಲ್ ಶಾಪ್‌ಗಳಲ್ಲಿ ಔಷಧಿ ಮಾರಾಟಕ್ಕೆ ನಿಯಮಗಳಿದ್ದಾಗ, ಕೆಲವರು ತಮ್ಮದೇ ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ಔಷಧಿಗಳನ್ನು ಇಟ್ಟುಕೊಂಡು ರೋಗಿಗಳಿಗೆ ನೀಡುತ್ತಿರುವುದು ನಿಯಮಾನುಸಾರವೇ ಎಂಬುದನ್ನು ಆರೋಗ್ಯ ಇಲಾಖೆ ಸ್ಪಷ್ಟಪಡಿಸಬೇಕಿದೆ…
ಜನರ ಪ್ರಮುಖ ಪ್ರಶ್ನೆಗಳು:.. ಅರ್ಹತೆ ಮತ್ತು ನೋಂದಣಿ ಇಲ್ಲದೆ ವೈದ್ಯಕೀಯ ಸೇವೆ ನೀಡುತ್ತಿರುವವರ ವಿರುದ್ಧ ಕ್ರಮ ಏಕೆ ಇಲ್ಲ..?ಅಲೋಪಥಿಕ್ ಔಷಧಿ ನೀಡುತ್ತಿರುವವರ ಅರ್ಹತೆ ಹಾಗೂ ನೋಂದಣಿಯನ್ನು ಪರಿಶೀಲಿಸುತ್ತಿರುವವರು ಯಾರು..?ಔಷಧಿ ಸಂಗ್ರಹಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಇವರು ಪಾಲಿಸುತ್ತಿದ್ದಾರೆಯೇ..?
H1 ವರ್ಗದ ಔಷಧಿಗಳ ಮಾರಾಟ ಮತ್ತು ವಿತರಣೆ ನಿಯಮಾನುಸಾರ ನಡೆಯುತ್ತಿದೆಯೇ.? ಅದನ್ನು ಪರಿಶೀಲಿಸುವ ಜವಾಬ್ದಾರಿ ಯಾರದ್ದು?ಇಂತಹ ಔಷಧಿಗಳನ್ನು ಪೂರೈಕೆ ಮಾಡುತ್ತಿರುವ ಮೆಡಿಕಲ್ ಡಿಸ್ಟ್ರಿಬ್ಯೂಟರ್‌ಗಳು ಹಾಗೂ ಮಾರಾಟಗಾರರ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆಯೇ.? ದೂರುಗಳು ಅಥವಾ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದಿದ್ದರೆ ಅದಕ್ಕೆ ಕಾರಣವೇನು.?
ಆರೋಗ್ಯ ಸಚಿವರೇ, ಹುಬ್ಬಳ್ಳಿ-ಧಾರವಾಡದತ್ತ ಒಮ್ಮೆ ಗಮನ ಹರಿಸಿ..! ಅರ್ಹತೆ ಇಲ್ಲದವರು ವೈದ್ಯರಂತೆ ಚಿಕಿತ್ಸೆ ನೀಡುತ್ತಿದ್ದಾರೆಯೇ? ನಿಯಮಬಾಹಿರವಾಗಿ ಔಷಧಿ ನೀಡುತ್ತಿದ್ದಾರೆಯೇ..?
ಎಂಬ ಆರೋಪಗಳ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ, ಡ್ರಗ್ ಕಂಟ್ರೋಲ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ನಿಯಂತ್ರಣ ಸಂಸ್ಥೆಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕಿದೆ.ಜನರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ.ನಕಲಿ ವೈದ್ಯರ ಹಾವಳಿ ನಿಜವೇ..?
ಅಥವಾ ಅಧಿಕಾರಿಗಳ ಕಣ್ಣೆದುರೇ ನಡೆಯುತ್ತಿರುವ ನಿಯಮಬಾಹಿರ ವೈದ್ಯಕೀಯ ಸೇವೆಯೇ..?
ಈ ಬಗ್ಗೆ ಆರೋಗ್ಯ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

