Breaking News

ಮನುಷ್ಯರ ಮೃಗೀಯ ವರ್ತನೆ: ಗಂಡು ನಾಯಿ ಮೇಲೆ 4 ಪುರುಷರಿಂದ ಅತ್ಯಾಚಾರ!

ಮುಂಬೈ: ಮನುಷ್ಯ ತನ್ನ ಕಾಮಕೃಷೆ ತೀರಿಸಿಕೊಳ್ಳುವುದಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳನ್ನೂ ಬಿಡುತ್ತಿಲ್ಲ. ಮೃಗೀಯ ವರ್ತನೆ ತೋರಿರುವ ನಾಲ್ವರು ವ್ಯಕ್ತಿಗಳು ಗಂಡು ನಾಯಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬೈ ನಲ್ಲಿ ನಡೆದಿದೆ.ಮಲ್ವಾನಿ ಚರ್ಚ್ ಏರಿಯಾದಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿದ್ದ ನಾಯಿ ಒಂದು ದಿನ ಪೂರ್ತಿ ನಾಪತ್ತೆಯಾಗಿತ್ತು, ನಂತರ ಏಕಾ ಏಕಿ ಕಾಣಿಸಿಕೊಂಡಾಗ ಅದರ ಜನನಾಂಗಕ್ಕೆ ತೀವ್ರವಾಗಿ ಇರಿದು ಘಾಸಿಗೊಳಿಸಲಾಗಿದ್ದ ಪರಿಣಾಮ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿತ್ತು. ಅನಿಮಲ್ಸ್ ಮ್ಯಾಟರ್ಸ್ ಟು ಮೀ ಎಂಬ ಪ್ರಾಣಿಪ್ರಿಯ ಸಂಘಟನೆ ಸದಸ್ಯರು ಇದನ್ನು ಗಮನಿಸಿ ಪಶುವೈದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.ನಾಯಿಗೆ ತೀವ್ರವಾದ ಗಾಯಗಳುಂಟಾಗಿದೆ, ಘಟನೆಯಿಂದ ಅಘಾತಕ್ಕೊಳಗಾಗಿರುವ ನಾಯಿ ಯಾರೇ ಅದನ್ನು ಮುಟ್ಟಲು ಯತ್ನಿಸಿದರೂ ಕಿರುಚಿಕೊಳ್ಳುತ್ತದೆ, ಉದ್ದೇಶಪೂರ್ವಕವಾಗಿ ಯಾರೋ ಅದರ ಮರ್ಮಾಂಗಕ್ಕೆ ಘಾಸಿಗೊಳಿಸಿದ್ದಾರೆ. ನಾಯಿಯನ್ನು ಸಹಜ ಸ್ಥಿತಿಗೆ ತರುವುದಕ್ಕೆ ಯತ್ನಿಸುತ್ತಿದ್ದೆವೆ ಎಂದು ಡಾ. ಅಂಕಿತಾ ಪಾಠಕ್ ತಿಳಿಸಿದ್ದಾರೆ.ಚರ್ಚ್ ಏರಿಯಾದಲ್ಲೆ ಇದ್ದ ವ್ಯಕ್ತಿಯೊಬ್ಬರು ನಾಯಿ ಪರಿಸ್ಥಿತಿಯನ್ನು ಗಮನಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅದನ್ನು ಹಿಡಿಯಲು ಹೋದಾಗ ಓಡಲು ಯತ್ನಿಸಿತ್ತು. ನಂತರ ಅದಕ್ಕೆ ಆಹಾರ ಕೊಟ್ಟೆವು ಎಂದು ಸ್ಥಳೀಯ ನಿವಾಸಿ ಸುಧಾ ಫರ್ನಾಂಡೀಸ್ ಹೇಳಿದ್ದಾರೆ.ಇದೇ ವೇಳೆ ಆಟೋ ಚಾಲಕನೋರ್ವ ಘಟನೆ ಬಗ್ಗೆ ಸುಧಾ ಫರ್ನಾಂಡೀಸ್ ಅವರಿಗೆ ಮಾಹಿತಿ ನೀಡಿದ್ದು, ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಡ್ರಗ್ಸ್ ಮತ್ತಿನಲ್ಲಿದ್ದ ನಾಲ್ವರು ವ್ಯಕ್ತಿಗಳು ನಾಯಿಯ ಮುಂಭಾಗದ ಎರಡು ಕಾಲುಗಳನ್ನು ಕಟ್ಟಿ ಬಾಯಿ ಬಂದ್ ಮಾಡಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸುತ್ತಿದ್ದರು ಆದರೆ ನಾಯಿ ಕಿರುಚಿದ್ದರಿಂದ ತಕ್ಷಣವೇ ಎಚ್ಚೆತ್ತ ಆಟೋ ಚಾಲಕ ಹೋಗುತ್ತಿದ್ದಂತೆ ನಾಲ್ವರೂ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *