ಕುಡಿಯುವ ನೀರಿಗಾಗಿ ಎಲ್ಲಿ ನೋಡಿದ್ರೂ ಹಾಹಾಕಾರವೆದ್ದಿದೆ. ಹಲವಾರು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗ್ತಿದೆ. ಆದ್ರೆ ಈ ಊರಲ್ಲಿ ಮಾತ್ರ ತುಂಬಿ ತುಳುಕುತ್ತಿರುವ ಕೆರೆಯನ್ನು ಖಾಲಿ ಮಾಡಲಾಗುತ್ತಿದೆ.. ಅಧಿಕಾರಿಯೊಬ್ಬ ತನ್ನ ಒಂದು ಲಕ್ಷದ ಫೋನ್ ಗಾಗಿ ಡ್ಯಾಂ ನೀರನ್ನು ಖಾಲಿ ಮಾಡಿದ ಪ್ರಕರಣ ಸುದ್ದಿಯಾಗುತ್ತಲೇ, ಧಾರವಾಡ ಜಿಲ್ಲೆಯಲ್ಲಿ ಇಂತಹದ್ದೆ ಪ್ರಕರಣ ಬೆಳಕಿಗೆ ಬಂದಿದ್ದು, ಇದನ್ನು ಜನರ ಮೂಢನಂಬಿಕೆ ಅನ್ನಬೇಕೋ ಅಥವಾ ನಿರ್ಧಾರ ಸರಿಯಿದೆ ಅನ್ನಬೇಕು ತಿಳಿಯದಾಗಿದೆ.

ಒಂದು ಕಡೆ ಅಧಿಕಾರಿಗಳು ಎಷ್ಟೇ ಕೇಳಿಕೊಂಡರು ಕರೆ ನೀರು ಬೇಡ ಬೇಡ ಅಂತಿದ್ದಾರೆ ಗ್ರಾಮಸ್ಥರು..
ಜನರ ತೀವ್ರ ಒತ್ತಡಕ್ಕೆ ಮಣಿದ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಕೆರೆ ನೀರನ್ನು ಯಂತ್ರಗಳ ಸಹಾಯದಿಂದ ಹೊರ ಚಲ್ಲುತ್ತಿದ್ದಾರೆ. ಸತತ ಮೂರು ದಿನಗಳಿಂದ ಹೊರ ಹಾಕುತ್ತಿದ್ದರು ಖಾಲಿಯಾಗದ ಕರೆ..ಇಷ್ಟಕ್ಕೂ ಕೆರೆ ನೀರು ಹೊರ ಹಾಕೋಕೆ ಕಾರಣ ಏನಂತೀರಾ..? ಇದಕ್ಕೆ ಅಸಲಿ ಕಾರಣ ಗ್ರಾಮದ ವ್ಯಕ್ತಿಯೋರ್ವನ ಆತ್ಮಹತ್ಯೆ.

ಹೌದು..ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಕರೆಯ ನೀರು ಖಾಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.500 ಕ್ಕೂ ಹೆಚ್ಚು ಮನೆಗಳಿರೋ ಉಮಚಗಿ ಗ್ರಾಮದಲ್ಲಿ, 3500 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದಿದ್ದು, ಮಲ್ಲಿಗೆವಾಡ ಗ್ರಾ.ಪಂ ವ್ಯಾಪ್ತಿಗೆ ಈ ಗ್ರಾಮ ಬರುತ್ತದೆ.. ಈ ತಿಂಗಳು ಮೊದಲ ವಾರದಲ್ಲಿ ಸಾಲ ಬಾಧೆ ತಾಳದೆ ಶಂಕರಪ್ಪ ಹುರಳಿ ಎಂಬಾತನ ಆತ್ಮಹತ್ಯೆಗೆ ಶರಣಾಗಿದ್ದ. ಆತ್ಮಹತ್ಯೆ ಮಾಡಿಕೊಂಡ ನಾಲ್ಕು ದಿನಗಳ ನಂತರ ಕೆರೆಯಲ್ಲಿ ಶಂಕರಪ್ಪನ ಶವ ತೇಲಿತ್ತು. ಕೊಳೆತ ಮತ್ತು ಮೀನುಗಳು ತಿಂದ ಸ್ಥಿತಿಯಲ್ಲಿ ಶವ ಸಿಕ್ಕಿತ್ತು. ಇದರಿಂದಾಗಿ ನೀರು ಕಲುಷಿತಗೊಂಡಿದೆ ಎಂದು ಜನ ವಾದಿಸುತ್ತಿದ್ದಾರೆ. ಇನ್ನೂ ಕೆಲವರು ಕೆರೆ ಮಲಿಗೆಯಾಗಿದೆ ಅಂತ ಕೆರೆ ನೀರು ಖಾಲಿ ಮಾಡಿಸುವಂತೆ ಗ್ರಾಮ ಪಂಚಾಯತ್ ಗೆ ಒತ್ತಾಯ ಮಾಡಿದ್ದರು..

ಈ ಕುರಿತು ಚೆನ್ನಬಸವ್ವ, ಮೃತ ಶಂಕರಪ್ಪ ಪತ್ನಿ ಮಾತನಾಡಿ,
ಜನರ ಮನವಿ ಮೊದಲಿಗೆ ಒಪ್ಪದ ಅಧಿಕಾರಿಗಳು, ಜನರ ಸಮಾಧಾನಕ್ಕಾಗಿ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನೀರು ಕಲುಷಿತಗೊಂಡಿಲ್ಲ ಅಂದ್ರೂ ಜನ ಕೇಳ್ತಿಲ್ಲ. ಕೆರೆ ನೀರನ್ನು ಖಾಲಿ ಮಾಡಿಸುವಂತೆ ಪಟ್ಟು ಹಿಡಿದಿದ್ದಾರೆ. ಗ್ರಾಮಸ್ಥರ ತೀವ್ರ ಒತ್ತಾಯಕ್ಕೆ ಮಣಿದ ಪಂಚಾಯಿತಿ ಅಧಿಕಾರಿಗಳು,ಯಂತ್ರಗಳ ಮೂಲಕ ಹಗಲು – ರಾತ್ರಿ ನೀರು ಹೊರ ಹಾಕುವ
ಕಾರ್ಯಕ್ಕೆ ಮುಂದಾಗಿದ್ದಾರೆ.. ಐದಾರು ದಿನಗಳಲ್ಲಿ ಕೆರೆ ಸಂಪೂರ್ಣ ಖಾಲಿಯಾಗೋ ನಿರೀಕ್ಷೆಯಿತ್ತು.. ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಇರುವ ಕಾರಣ ಕೆರೆ ಸದ್ಯಕ್ಕೆ ಖಾಲಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಸತ್ತವನ ಅನಿಷ್ಟದಿಂದಾಗಿ ಕೆರೆ ಕಲುಷಿತಗೊಂಡಿದೆ. ಬೇರೆ ಊರಿಗೆ ಹೋಗಿ ನೀರು ತಂದ್ರೂ ಪರ್ವಾಗಿಲ್ಲ. ನೀರು ಖಾಲಿ ಮಾಡಿಸಲೇ ಬೇಕೆಂದು ಹೇಳಿದ್ದೇವೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಇನ್ನೂ ಅಧಿಕಾರಿಗಳು ಏನೆಲ್ಲಾ ಮನವೊಲಿಸಿದ್ರೂ ಗ್ರಾಮಸ್ಥರು ಕೇಳುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ನೀರು ಹೊರ ಹಾಕ್ತಿರೋದಾಗಿ ಗ್ರಾ.ಪಂ. ಸಿಬ್ಬಂದಿ ಕೈ ತೊಳೆದು ಕೊಂಡಿದೆ. ಇನ್ನೂ ಚೆನ್ನಾಗಿರುವ ಕೆರೆ ನೀರು ಬಿಟ್ಟು ಅನಿವಾರ್ಯವಾಗಿ ಜನ ಐದಾರು ಕಿಲೋಮೀಟರ್ ಗಟ್ಟಲೆ ತೆರಳಿ ಫಿಲ್ಟರ್ ನೀರು ತರುವಂತಾಗಿದೆ. ಇದು ಮೂಢನಂಬಿಕೆಯ ಪರಮಾವಧಿಯ ಎನ್ನಬೇಕೋ ಅಥವಾ, ಜಾಗೃತಿಯ ಕೊರತೆ ಎನ್ನಬೇಕೊ ತಿಳಿಯದ ವಿಷಯವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

