Breaking News

ನಾಡಿನ ಸಮಸ್ತ ಜನತೆಗೆ .ಬಿಗ್‌. ಟಿ.ವಿ, ವತಿಯಿಂದ ಕಾರು ಹುಣ್ಣಿಮೆ ಶುಭಾಶಯಗಳು..

ರೈತರ ಸಂಭ್ರಮದ ಹಬ್ಬ, ನಾಡ ಹಬ್ಬ ,ರೈತರು ಎತ್ತುಗಳನ್ನು ಶೃಂಗಾರ ಮಾಡಿ. ವಿವಿಧ ತಿಂಡಿ ತಿನಿಸುಗಳನ್ನು ರೈತನ ಮಿತ್ರನಾದ ಎತ್ತುಗಳಿಗೆ ಕೊರಳಿಗೆ ಕಟ್ಟಿ ಹಾಗೂ ಕೊಂಬಿನಂಚಿಗೆ ಬಣ್ಣಬಳಿದು ಸಂತಸ ಪಡುವ ಹಬ್ಬವೇ ಕಾರಹುಣ್ಣಿಮೆ, ಅಲ್ಲದೇ ಇಂದು ಸಾಯಂಕಾಲ ನೆಡೆಯುವ ಎತ್ತಿನ ಮೆರವಣಿಗೆಯಲ್ಲಿ ಎತ್ತುಗಳನ್ನು ಪುರುಷರು ಹಿಡಿದು ಎತ್ತಿನಿಂದ ಕೊಡಬಳಿಗೆ ಕಿತ್ತು ತಿನ್ನುವ ಸ್ಪರ್ಧೆಯು ಸಹ ಉತ್ತರ ಕರ್ನಾಟಕದ ಕೆಲವೊಂದು ಭಾಗದಲ್ಲಿ ನೆಡೆಯುತ್ತದೆ.

ಅಲ್ಲದೆ ಇಂದಿನ ದಿನ ಸಂಜೆ ವೇಳೆಗೆ ಊರ ಗೌಡ್ರ ಒಂದು ಬಿಳಿ ಎತ್ತು ಹಾಗೂ ಒಂದು ಕಂದು ಬಣ್ಣದ ಎತ್ತಿನಿಂದ ಕರಿ ಹರಿಯುವ ಸಂಪ್ರದಾಯವೂ ಸಹ ನಡೆಯುತ್ತದೆ. ಈ ಆಚರಣೆ ವೇಳೆ ಎತ್ತರಕ್ಕೆ ಕಟ್ಟಿದ ಬೇವಿನ ಸೊಪ್ಪಿನಲ್ಲಿ ಮಾಡಿದ ಕರಿಯನ್ನು ಯಾವ ಎತ್ತು ಜಗ್ಗಿ ಹರಿಯುತ್ತದೆವೋ. ಆ ಎತ್ತಿನ ಬಣ್ಣದ ಆಧಾರದ ಮೇಲೆ ರೈತರು ತಮ್ಮಗೆ ಯಾವ ಬೆಳೆ ಕೈಹಿಡಿಯುತ್ತದೆ ಎಂಬುದನ್ನು ನಿರ್ಧಾರ ಮಾಡುವುದು ಪ್ರತೀತಿ. ಬಿಳಿ ಎತ್ತು ಕರಿ ಹರಿದರೆ ಮುಂಗಾರ ಬೆಳೆ ಲಾಭ ಎಂದು, ಕಂದು ಎತ್ತು ಕರಿಯನ್ನು ಜಗ್ಗಿ ಹರಿದರೆ ಹಿಂಗಾರು ಬೆಳೆ ಲಾಭ ಎನ್ನುವುದು ನಮ್ಮ ಹಿರಿಯರು ಮಾಡಿಕೊಂಡ ಬಂದ ಸಂಪ್ರದಾಯಗಳಲ್ಲಿ ಒಂದು ಅಂತಹ ಹಬ್ಬಕ್ಕೆ ಇಂದು ನಿಮ್ಮ ಬಿಗ್ಗ ಟಿ.ವಿ ವತಿಯಿಂದ ಶುಭಾಶಯಗಳು ಶುಭ ತಿಳಿಸುವವರು ಬಿಗ್‌ ಟಿ.ವಿ ಸಿಬ್ಬಂದಿಗಳು ಹಾಗೂ ಮುಖ್ಯಸ್ಥರು ಹಾಗೂ ವರದಿಗಾರರು ಹುಬ್ಬಳ್ಳಿ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *