ತುಮಕೂರು: ಇಲ್ಲೊಬ್ಬ ಬೈಕ್ ಸವಾರನೊಬ್ಬ ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತಕ್ಕೀಡಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಹನುಮಂತಪುರದಲ್ಲಿ ನಡೆದಿದೆ. ಹನುಮಂತಪುರದ ಮೂಲದ ನಿವಾಸಿ ಕೃಷ್ಣ (34) ಎಂಬುವವರು ಮಿಡಿಗೇಶಿಯಿಂದ ತಮ್ಮ ಊರಿಗೆ ಹಿಂದಿರುಗುತ್ತಿದ್ದಾಗ ಕರಡಿ ಅಡ್ಡಬಂದಿದೆ. ಇದರಿಂದ ಗಾಬರಿಗೊಂಡ ಕೃಷ್ಣ ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ನಿಂದ ಬಿದ್ದಿದ್ದಾನೆ.
ಬೈಕ್ ಮೇಲೆ ಸ್ವಂತ ಊರಿಗೆ ಹಿಂತಿರುಗುತ್ತಿದ್ದಾಗ ಮಾರ್ಗ ಮಧ್ಯೆ ಏಕಾಏಕಿ ಕರಡಿ ಅಡ್ಡಬಂದಿದೆ. ಇದರಿಂದ ಅವಕ್ಕಾದ ಕೃಷ್ಣ ಕರಡಿಯಿಂದ ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಬಿದ್ದಿದ್ದಾನೆ. ಇದರಿಂದ ಕೃಷ್ಣನಿಗೆ ಗಾಯಗಳಾಗಿವೆ. ನಂತರ ಸ್ಥಳೀಯರ ಸಹಾಯದಿಂದ ಕೃಷ್ಣ ಮಧುಗಿರಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಾಹಿತಿ ತಿಳಿದ ಅರಣ್ಯಾಧಿಕಾರಿ ಮುತ್ತುರಾಜ್, ತಕ್ಷಣವೇ ಆಸ್ಪತ್ರೆಗೆ ಭೇಟಿ ಮಾಹಿತಿ ಪಡೆದುಕೊಂಡರು.
bigtvnews | Hubli Dharwad News | Kannada News | Karnataka News Hubli News | News In Hubli | Local news





