ಧಾರವಾಡ: ಈಗಲೂ ನನ್ನ ವಿರುದ್ಧ ಇನ್ನೂ ಷಡ್ಯಂತ್ರಗಳು ಚಾಲ್ತಿಯಲ್ಲೇ ಇವೆ. ಈಗಲೂ ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು. ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅವಕಾಶ ನೀಡದೆ ಇರುವ ನ್ಯಾಯಾಲಯ ಘಟನೆಗೆ ಸಂಭಂದಿಸಿದ ಹಿನ್ನೆಲೆಯಲ್ಲಿ ಸವದತ್ತಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಇನ್ನೂ ಷಡ್ಯಂತ್ರಗಳು ನಡೆಯುತ್ತಲೇ ಇವೆ. ಇವನ್ನೆಲ್ಲ ನೋಡಿದಾಗ ಬಹಳ ಬೇಜಾರು ಆಗುತ್ತದೆ. ಈ ಸಂಬಂಧ ನಾನು ಹೈಕೋರ್ಟ್ ಮೊರೆ ಹೋಗುತ್ತೇನೆ ಎಂದರು. ಎಂದು ಶಾಸಕ ವಿನಯ ಕುಲಕರ್ಣಿ ತಿಳಿಸಿದ್ದಾರೆ. ಅಲ್ಲದೆ ಈ ಸಮಯದಲ್ಲಿ ಮತನಾಡಿದ ಅವರು ಧಾರವಾಡದಲ್ಲಿ ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇನ್ನೆರಡು ದಿನ ನೋಡಿಕೊಂಡು ನಮ್ಮ ಸರ್ಕಾರ ಬರ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಶಾಸಕ ವಿನಯ್ ಕುಲಕರ್ಣಿ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





