ವಾಣಿಜ್ಯ ನಗರಿ ಹುಬ್ಬಳ್ಳಿಯ ಬಟ್ಟೆ ಅಂಗಡಿ ಒಂದರಲ್ಲಿ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ದುರ್ಗದ ಬೈಲ್ ಹತ್ತಿರ ಇರುವ ಬಾಬಾಸಾನ ಗಲ್ಲಿಯ ಬಟ್ಟೆ ಅಂಗಡಿ ಒಂದರಲ್ಲಿ ಲಕ್ಷ ಗಟ್ಟಲೆ ಬೆಲೆಬಾಳುವ ಬಟ್ಟೆಗಳನ್ನು ಅದೇ ಅಂಗಡಿಯಲ್ಲಿ ಕೆಲಸ ಮಾಡುವವರು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಹೌದು ಕುಮಾರ್ ಸಿಂಥೆಟಿಕ್ಸ ಅನ್ನೋ ಬಟ್ಟೆ ಅಂಗಡಿಯಲ್ಲಿ ಕೆಲ್ಸಾ ಮಾಡ್ತಿರುವ ಅಂಗಡಿ ಕೆಲಸಗಾರರು ಹಾಗೂ ಅವರ ಸ್ನೇಹಿತರೊಂದಿಗೆ ಈ ಒಂದು ಕಳ್ಳತನದ ಕೃತ್ಯ ಎಸಗಿದ್ದಾರೆ.

ಸದ್ಯ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ, ವಿನೋದ ಹಾಗೂ ಮಹಾವೀರ ಸಿಂಘ್ ಅನ್ನೋ ಕಳ್ಳರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಾರೆ ಹುಬ್ಬಳ್ಳಿಯಲ್ಲಿ ದಿನದಿಂದ ದಿನಕ್ಕೆ ಕ್ರೈಂ ರೇಟ್ ಹೆಚ್ಚಾಗುತ್ತಿದ್ದು ಹುಬ್ಬಳ್ಳಿ ಧಾರವಾಡ ಆಯುಕ್ತರು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.