ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ದುರ್ಬಲ ವರ್ಗದವರ ಕಲ್ಯಾಣಕ್ಕೆ, ರೈತರ ಬಲವರ್ಧನೆಗೆ ಆದ್ಯತೆ ನೀಡಲಾಗಿದೆ ಎಂದು ಕರ್ನಾಟಕ ಥಿಂಕರ್ಸ್ ಫೋರಮ್ ಅಧ್ಯಕ್ಷ ಹಾಗೂ ಹೈಕೋರ್ಟ್ ಹಿರಿಯ ವಕೀಲ ಪಿ.ಎಚ್. ನೀರಲಕೇರಿ ಅವರು ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಐದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸರ್ಕಾರವು ₹ 52 ಸಾವಿರ ಕೋಟಿ ಅನುದಾನ ಇಟ್ಟಿದೆ. ಈ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ಸರಾಸರಿ ವರ್ಷಕ್ಕೆ ₹ 48 ಸಾವಿರದಿಂದ ₹ 60 ಸಾವಿರವರೆಗೆ ಆರ್ಥಿಕ ನೆರವು ಸಿಗುತ್ತದೆ ಎಂದಿದ್ದಾರೆ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೈಬಿಡಲಾಗುವುದು ಎಂದು ಘೋಷಿಸಲಾಗಿದೆ. ರೈತರಿಗೆ ನೀಡಲಾಗುತ್ತಿರುವ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲವನ್ನು ₹ 3 ಲಕ್ಷದಿಂದ ₹5 ಲಕ್ಷಕ್ಕೆ ಹಾಗೂ ದೀರ್ಘಾವಧಿ ಸಾಲವನ್ನು ₹ 10 ಲಕ್ಷದಿಂದ ₹15 ಲಕ್ಷಕ್ಕೆ ಹೆಚ್ಚಳ ಮಾಡಿದ್ದಾರೆ, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೇಖರಣೆ, ಮತ್ತು ಶೀತಲ ಘಟಕ ಸ್ಥಾಪನೆ ಒತ್ತು ಕೊಡಬೇಕು. ಹಾವೇರಿ, ಗದಗ ಸೇರಿ ಅಖಂಡ ಧಾರವಾಡ ಜಿಲ್ಲಾಗಳಲ್ಲಿ ಸಾಕಷ್ಟು ನುರಿತ ಮಾನವ ಸಂಪನ್ಮೂಲ ಇದೆ. ಇದನ್ನೂ ಸಮರ್ಥವಾಗಿ ಬಳಸಿಕೊಳ್ಳಲು ಇನ್ನೂ ಹಲವು ಹೊಸ ಯೋಜನೆಗಳು ಈ ಭಾಗಕ್ಕೆ ಬರಬೇಕಾಗಿತ್ತು ಹುಬ್ಬಳ್ಳಿ ಧಾರವಾಡ ರಾಜ್ಯದ ಏರಡನೆ ದೊಡ್ಡ ನಗರ ಮೂಲ ಸೌಕರ್ಯ ವತ್ತು ಕೊಡಬೇಕಿತ್ತು 1989ರಿಂದ ನೆನೆಗುದಿಗೆ ಬಿದ್ದ ವರ್ತುಲ ರಸ್ತೆ ನಿರ್ಮಾಣ ಪರಿಗಣಿಸಿಲ್ಲ , ಬೆಣ್ಣಿ ಹಳ್ಳ ಅತಿವೃಷ್ಟಿ ಶಾಸ್ವತ ಪರಿಹಾರ ಕುರಿತು ನಿಗದಿ ಮಾಡುವ ಭರವಸೆ ಇತ್ತು.ಮುಂದಿನ ಬಜೆಟ್ ನಲ್ಲಿ ಸರ್ಕಾರ ಇದನ್ನು ಜಾರಿ ಮಾಡಲು ವತ್ತಾಯಿಸುತ್ತೆನೆ. ಮತ್ತು ಸರ್ಕಾರ ಪರಿಗಣಿಸುವ ಭರವಸೆ ಇದೆ. ಮಹದಾಯಿ ಯೋಜನೆಗೆ ಅನುದಾನ ಹಂಚಿಕೆ ಮಾಡದಿರುವುದು ಬೇಸರ ತರಿಸಿದೆ ಎಂದು ಅವರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





