ಸ್ಯಾಂಡಲ್‌ವುಡ್‌ನ (Sandalwood) ಪಟಪಟ ಮಾತನಾಡೋ ಸುಂದರಿ ನಿರೂಪಕಿ ಅನುಶ್ರೀ (Anchor Anushree) ಅವರು ಸದಾ ಅವರಿಗೆ ಮದುವೆ (Wedding) ಬಗ್ಗೆಯೇ ಪ್ರಶ್ನೆ ಎದುರಾಗುತ್ತದೆ. ಇದೀಗ ಫ್ಯಾನ್ಸ್, ಹೊಸ ವಿಚಾರಕ್ಕೆ ಅನುಶ್ರೀ ಹಿಂದೆ ಬಿದ್ದಿದ್ದಾರೆ. ಮದುವೆಯಲ್ಲ, ಬದಲಾಗಿ ಹೊಸ ವಿಚಾರವಾಗಿ ಅನುಶ್ರೀಗೆ ಬೇಡಿಕೆ ಇಟ್ಟಿದ್ದಾರೆ.
ರಿಯಾಲಿಟಿ ಶೋಗಳ ನಿರೂಪಣೆ ಮತ್ತು ಕನ್ನಡ ಸಿನಿಮಾಗಳ ಪ್ರಿ ರಿಲೀಸ್ ಈವೆಂಟ್‌ನ ನಿರೂಪಣೆ ಅಂತಾ ಸದಾ ಒಂದಲ್ಲಾ ಒಂದು ಕಾರ್ಯಕ್ರಮಗಳ ಮೂಲಕ ಮಾತಿನ ಮಲ್ಲಿ ಅನುಶ್ರೀ ಸದ್ದು ಮಾಡುತ್ತಾರೆ. ಇದೀಗ ಇತ್ತೀಚಿಗೆ ತಮ್ಮ ಖಾಸಗಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದ ನಿರೂಪಕಿಗೆ ಅಭಿಮಾನಿಗಳಿಂದ ಪ್ರಶ್ನೆಯೊಂದು ಎದುರಾಗಿದೆ.
ಸದಾ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳು ಈಗ ನೀವು ಯಾವಾಗ ಮತ್ತೆ ಸಿನಿಮಾ (ಮಾಡ್ತೀರಾ ಅಂತಾ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಟಿ ಪ್ರತಿಕ್ರಿಯಿಸಿ, ಒಳ್ಳೆಯ ಕಥೆ ಮತ್ತು ತಂಡ ಬಂದಾಗ ಮತ್ತೆ ಸಿನಿಮಾ ಮಾಡ್ತೀನಿ ಎಂದು ಖುಷಿಯಿಂದ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





