ಬೆಂಗಳೂರು: ಸ್ವಾತಂತ್ರ ದಿನಾಚರಣೆಯ ಪ್ರಯಕ್ತವಾಗಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿತ್ತು. ಆಗಸ್ಟ್ 15ರಂದು ಅದಕ್ಕೆ ತೆರೆ ಬಿದ್ದಿದೆ. ಕೊನೆ ದಿನವಾಗಿದ್ದರಿಂದ ಮತ್ತು ಸ್ವಾತಂತ್ರ್ಯ ದಿನಾಚರಣೆ ರಜೆ ಇದ್ದಿದ್ದರಿಂದ ಫ್ಲವರ್ ಶೋ ನೋಡಲು ಜನರು ಮುಗಿಬಿದ್ದಿದ್ರು. ಎಲ್ಲಿ ನೋಡಿದರೂ ಜನರೇ ಕಂಡುಬಂದಿದ್ರು ಹಾಗೆ ಈ ವರ್ಷ ದಾಖಲೆ ಮಟ್ಟದಲ್ಲಿ ಆದಾಯವಾಗಿದೆಎಂದು ಅಲ್ಲಿನ ತೋಟಗಾ ನಗರದ ಹಲವೆಡೆ ಇಂದು ಮತ್ತು ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ: ಎಲ್ಲೆಲ್ಲಿ ನೋಡೋಣ!
ಈ ವರ್ಷ ವಿಧಾನಸೌಧ ಹಾಗೂ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಕಾನ್ಸೆಪ್ಟ್ ನಲ್ಲಿ ಎರಡೂವರೆ ಕೋಟಿ ಬಜೆಟ್ ನಲ್ಲಿ 12 ದಿನಗಳ ಕಾಲ ಫ್ಲವರ್ ಶೋ ಆಯೋಜನೆ ಮಾಡಲಾಗಿತ್ತು. ನಿನ್ನೆ 12 ನೇ ದಿನದ ಫ್ಲವರ್ ಶೋಗೆ ತೆರೆಬಿದ್ದಿದ್ದು, ವಿಧಾನ ಸೌಧ ಹಾಗೂ ಕೆಂಗಲ್ ಹನುಮಂತಯ್ಯಾವರ ಕಾನ್ಸಪ್ಟ್ ಸಿಲಿಕಾನ್ ಜನರ ಮನಸೋರೆ ಗೊಳಿಸಿದೆ. 130 ಬಗೆಯ ಹೂವಿನ ಲೋಕವನ್ನ ನೋಡಲು ಜನರು ನಾ ಮುಂದು ತಾ ಮುಂದು ಅಂತ ಕುಟುಂಬ ಸಮೇತವಾಗಿ ಬಂದಿದ್ದರಿಂದ ನಿನ್ನೆ ಲಾಲ್ ಬಾಗ್ ನಲ್ಲಿ ಎಲ್ಲಿ ನೋಡಿದ್ರು ಜನರೇ ಕಾಣುಸ್ತಾ ಇದ್ರು.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಫ್ಲವರ್ ಶೋ ಟಿಕೆಟ್ ಗಾಗಿ ಕಿಲೋ ಮೀಟರ್ ಗಟ್ಟಲೆ ಕ್ಯು ನಿಂತಿದ್ರು. ಹೀಗಾಗಿ ಜನರನ್ನ ನಿಭಾಯಿಸಲು ತೋಟಾಗಾರಿಕಾ ಸಿಬ್ಬಂದಿ ಹರಸಾಹಸ ಪಟ್ಟರು.ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್ ಮಾತನಾಡಿ, ಕಳೆದ 12 ದಿನಗಳಲ್ಲಿ 8.2 ಲಕ್ಷ ಮಂದಿ ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಸುಮಾರು 4 ಕೋಟಿ ಆದಾಯ ಬಂದಿದೆ. ಆದರೆ ಕಳೆದ ಸ್ವಾತಂತ್ರ್ಯ ದಿನದಂದು ದಿವಂಗತ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಅವರ ವಿಶೇಷ ಫ್ಲವರ್ ಶೋ ಸಮಯದಲ್ಲಿ ನಾವು 9.5 ಲಕ್ಷ ಮಂದಿ ಭೇಟಿ ನೀಡುವ ಮೂಲಕ ದಾಖಲೆ ಸಂಖ್ಯೆಯ ಜನರ ಭೇಟಿಯನ್ನು ನೋಡಿದ್ದೆವು. ಆದರೆ, ಆಗ ಕೇವಲ 3.3 ಕೋಟಿ ರೂ ಅಷ್ಟು ಮಾತ್ರ ಆದಾಯ ಬಂದಿತ್ತು ಎಂದರು.
ಹಾಗೆ ಕಳೆದ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನ ಮುಗಿಬಿದ್ದಿದ್ದರು. ನಾವು ಅನೇಕರನ್ನು ಉಚಿತವಾಗಿ ಲಾಲ್ಬಾಗ್ ಫ್ಲವರ್ ಶೋ ವೀಕ್ಷಣೆಗೆ ಅನುವುಮಾಡಿಕೊಟ್ಟಿದ್ದೆವು. ಆದರೆ ಈ ಬಾರಿ ನಾವು ಎಚ್ಚರಿಕೆಯಿಂದ ಎಲ್ಲವನ್ನೂ ನಿಭಾಯಿಸಿದ್ದೇವೆ. UPI ಪಾವತಿಗಳನ್ನು ಸುಗಮಗೊಳಿಸುವುದರ ಜೊತೆಗೆ ಆನ್‌ಲೈನ್ ಬುಕಿಂಗ್ಗೂ ಅವಕಾಶ ಕೊಟ್ಟಿದ್ದೆವು. ಹಾಗಾಗಿ ದಾಖಲೆ ಮಟ್ಟದ ಆದಾಯ ಆಗಿದೆ ಎಂದರು
bigtvnews | Hubli Dharwad News | Kannada News | Karnataka News Hubli News | News In Hubli | Local news





