ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಟಾಪನೆಗೆ ಬಿಜೆಪಿ ಪಟ್ಟು: ಅಹೋರಾತ್ರಿ ಪ್ರತಿಭಟನೆಗೆ ನಿರ್ಧಾರ…ಹುಬ್ಬಳ್ಳಿಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ವಿಳಂಭ ಮಾಡುತ್ತಿರುವದನ್ನು ಖಂಡಿಸಿ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಮಹಾನಗರ ಪಾಲಿಕೆಯಲ್ಲಿ ಮುತ್ತಿಗೆ ಹಾಕಿ ಮಹಾನಗರ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದರು.ಈದ್ಗಾ ಮೈದಾನಲ್ಲಿ ಅನುಮತಿ ವಿಳಂಬಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಅರವಿಂದ ಬೆಲ್ಲದ ನೇತೃತ್ವದ ನಿಯೋಗ ಕೂಡಲೇ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ.ಇಲ್ಲದಿದ್ದರೆ ಇಲ್ಲಿಂದ ಎದ್ದು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈದ್ಗಾ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಮುಂಚೆಯೇ ಅನುಮತಿ ನೀಡಬೇಕು. ಪಾಲಿಕೆ ಆಯುಕ್ತರ ಈಶ್ವರ್ ಉಳ್ಳಾಗಡ್ಡಿ ವಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಬೆಲ್ಲದ್ ಆಕ್ರೋಶ ಹೊರಹಾಕಿದರು. ಅಂಜುಮನ್ ಸಂಸ್ಥೆ ಈದ್ಗಾ ಮೈದಾನದಲ್ಲಿ ಅನುಮತಿ ನೀಡಬಾರದು ಎಂದು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಂದು ವಿಚಾರಣೆಗೆ ಬರಲಿದೆ. ತೀರ್ಪು ಬರುವ ಮುನ್ನವೇ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಬಿಜೆಪಿ ಪಾಲಿಕೆ ಸದಸ್ಯರು ಒತ್ತಡ ಹಾಕುತ್ತಿದ್ದಾರೆ.ಈ ಸಂಬಂಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.ಪಾಲಿಕೆಯ ಆವರಣದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಅನುಮತಿಗಾಗಿ ಮಹಿಳೆಯರು ಒತ್ತಾಯಿಸುತ್ತಿದ್ದಾರೆ.

ಹೀಗಾಗಿ ಪಾಲಿಕೆ ಆವರಣದಲ್ಲಿ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿದೆ.ಹುಧಾ ಪಾಲಿಕೆ ಆಯುಕ್ತರು ಸಿದ್ದರಾಮಯ್ಯ ಸರ್ಕಾರದ ಕೈಗೊಂಬೆ: ಬೆಲ್ಲದ ಆರೋಪ.. ಕಾಂಗ್ರೆಸ್ ಪಕ್ಷ ಮುಸ್ಲಿಂ ತುಷ್ಟೀಕರಣಕ್ಕಾಗಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡತಿಲ್ಲ .ಪಾಲಿಕೆ ಆಯುಕ್ತರು ಸಿಎಂ ಕೈಗೊಂಬೆಯಾಗಿದ್ದಾರೆ ಎಂದು ಅರವಿಂದ ಬೆಲ್ಲದ ಆರೋಪಿಸಿದರು.ನಮಗೇ ಅನುಮತಿ ಕೊಡವರೆಗೂ ನಾವು ಪಾಲಿಕೆ ಬಿಟ್ಟು ಹೋಗೋದಿಲ್ಲ. ಸುಪ್ರೀಂ ಕೋರ್ಟ್ ಅನುಮತಿ ಕೊಟ್ರು,ಪಾಲಿಕೆ ಆಯುಕ್ತರು ಪರವಾನಿಗೆ ಕೊಡ್ತೀಲ್ಲ.ಅವರು ಪರವಾನಿಗೆ ಕೊಡಲಿ ಬಿಡಲಿ ಅಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡೋದು ಫಿಕ್ಸ್.ಹುಬ್ಬಳ್ಳಿ ಜನತೆ ಶಾಂತವಾಗಿ ಗಣೇಶ ಹಬ್ಬ ಆಚರಣೆ ಮಾಡ್ತೀವಿ.ಕಳೆದ ವರ್ಷದಂತೆ ಚೆನ್ನಮ್ಮ ವೃತ್ತದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೇಳಿದ್ವು.ಸಾಮಾನ್ಯ ಸಭೆಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಟ್ಟಿತ್ತು.ಸಾಮಾನ್ಯ ಸಭೆಯಲ್ಲಿ ತಗೆದುಕೊಂಡು ನಿರ್ಣಯಕ್ಕೆ ಆಯುಕ್ತರು ವರ್ಕಿಂಗ್ ಆರ್ಡರ್ ಮಾಡ್ತಿಲ್ಲ. ಮುಸ್ಲಿಂ ಸಮಾಜಕ್ಕೆ ನಮಾಜ್ ಮಾಡೋಕೆ ಸಿದ್ದರಾಮಯ್ಯ ಸರ್ಕಾರ ಅವಕಾಶ ಕೊಟ್ಟಿದೆ. ಆದ್ರೆ ಗಣೆಶ ಹಬ್ಬಕ್ಕೆ ಸಿದ್ದರಾಮಯ್ಯ ಸರ್ಕಾರ ಅನುಮತಿ ಕೊಡ್ತಿಲ್ಲ. ಪಾಲಿಕೆ ಆಯುಕ್ತರು ಸಿದ್ದರಾಮಯ್ಯ ಸರ್ಕಾರ ನಿರ್ದೇಶನದಂತೆ ಕೆಲಸ ಮಾಡ್ತೀದಾರೆ..ಅನುಮತಿ ಸಿಗೋವರೆಗೂ ಪಾಲಿಕೆ ಬಿಟ್ಟು ಹೋಗಲ್ಲ. ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವದು ಎಂದರು.ಹಿಂದೂ ಭಾವನೆಗಳ ಜೊತೆ ಚೆಲ್ಲಾಟ ಆಡಬೇಡಿ. ನಿಮಗೆ ಹಿಂದೂಗಳು ವೋಟ್ ಹಾಕಿದ್ದಾರೆ,ಹೀಗಾಗಿ ಕೂಡಲೇ ಅನುಮತಿ ಕೊಡಿ.ಕಾನೂನು ಪ್ರಕಾರ ಯಾರದರೂ ತೊಂದರೆ ಮಾಡ್ರಾರೆ ಅಂದ್ರೆ ಅವರನ್ನು ಒಳಗೆ ಹಾಕಿ ಎಂದರು ಎಚ್ಚರಿಕೆ ನೀಡಿದರು.ಬೈಟ್- ಅರವಿಂದ ಬೆಲ್ಲದ, ಶಾಸಕ
bigtvnews | Hubli Dharwad News | Kannada News | Karnataka News Hubli News | News In Hubli | Local news

