Breaking News

ಮನೆಯ ಮಂದಿಯನ್ನು ಕಟ್ಟಿ ಹಾಕಿದ ಖದೀಮರು: ಫಿಲ್ಮಿ ಸ್ಟೈಲ್ ನಲ್ಲಿ ಕಳ್ಳತನ….!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನ ಹಾವಳಿ ಹೆಚ್ಚಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆಗೆ ಮನೆಗೆ ನುಗ್ಗುತ್ತಿದ್ದ ಕಳ್ಳರು‌ ಈಗ ಮನೆಯಲ್ಲಿದ್ದವರನ್ನ ಕಟ್ಟಿಹಾಕಿ ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಹೌದು..ಮನೆಯ ಸದಸ್ಯರನ್ನು ಕಟ್ಟಿಹಾಕಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ

ನಡೆದಿದೆ. ಕಳ್ಳತನ. ಉಲ್ಲಾಸ ದೊಡ್ಡಮನಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ವಿದ್ಯಾ ಮಂದಿರ ಬುಕ್ ಡಿಪೋ ಮಾಲೀಕ ಉಲ್ಲಾಸ ದೊಡ್ಡಮನಿಯವರ ಮನೆಯ ಕಿಟಕಿಯ ಕಬ್ಬಿಣದ ಗ್ರೀಲ್ ಕಟ ಮಾಡಿ ಮನೆಹೊಕ್ಕು 6 ಜನರನ್ನ ಕಟ್ಟಿ ಹಾಕಿ ಕಳ್ಳತನ ಮಾಡಿದ್ದಾರೆ‌.ಸುಮಾರು ಎಂಟು ಜನ ಡಕಾಯಿತರಿಂದ ಕೃತ್ಯ ನಡೆದಿದ್ದು, ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಯಾದ ಗಣೇಶನನೇ ಟಾರ್ಗೆಟ್ಮಾ

ಡಿಕೊಂಡು ಕಳ್ಳತನಕ್ಕೆ ಮುಂದಾಗಿದ್ದು, ಪೊಲೀಸರು ಈದ್ಗಾ ಮೈದಾನದ ಗಣೇಶನ ವಿಸರ್ಜನೆಯಲ್ಲಿ ಬ್ಯೂಶಿ ಆಗಿರುವುದನ್ನು ಬಂಡವಾಳ ಮಾಡಿಕೊಂಡು ಕಳ್ಳತನ ನಡೆಸಿದ್ದಾರೆ.ಗಣೇಶನ ವಿಸರ್ಜನೆಗೆ ಐದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಇದರಿಂದಾಗಿ ಗಸ್ತು ತಿರುಗಲು ಪೊಲೀಸರ ಕೊರತೆ ಉಂಟಾಗಿದೆ. ಇದನ್ನೆ ಬಂಡವಾಳಗಿಟ್ಟುಕೊಂಡ ಡಾಕಾಯಿತರು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಗೋಕುಲ ರೋಡ್ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *