Breaking News
Featured Video Play Icon

ಕಿಮ್ಸ್ ವೈದ್ಯರ ದಿವ್ಯ ನಿರ್ಲಕ್ಷ್ಯ: ಮಗು ಅದಲು ಬದಲು ಮಾಡಿದ ಸಿಬ್ಬಂದಿಯ ವಿರುದ್ಧ ಕುಟುಂಬಸ್ಥರ ಆಕ್ರೋಶ…

ಹುಬ್ಬಳ್ಳಿ: ಗಂಡು ಮಗು ಹುಟ್ಟಿದರೇ ಹೆತ್ತವರಿಗೆ ಎಲ್ಲಿಲ್ಲದ ಸಂತೋಷ. ಆದರೆ ಗಂಡು ಹುಟ್ಟಿದ್ದ ಖುಷಿಯಲ್ಲಿದ್ದ ಹೆತ್ತವರಿಗೆ ಆಸ್ಪತ್ರೆಯ ವೈದ್ಯರ ಯಡವಟ್ಟು ದೊಡ್ಡ ಸಂಕಷ್ಟವನ್ನೇ ತಂದೊಡ್ಡಿತು. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..ವಾಣಿಜ್ಯನಗರಿ ಹುಬ್ಬಳ್ಳಿಯ ಕಿಮ್ಸ್ ವೈದ್ಯರ ಎಡವಟ್ಟು ಮಾಡಿದ್ದು, ಕಿಮ್ಸ್ ನಲ್ಲಿ ಜನ್ಮ ಪಡೆದ ಮಗು ಅದಲು ಬದಲು ಮಾಡಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಹೌದು.. ಇದೇ ತಿಂಗಳು 3 ರಂದು ಜನಿಸಿದ ಗಂಡು ಮಗುವಿನ ಬದಲಾಗಿ ಪಾಲಕರಿಗೆ ಹೆಣ್ಣು ಮಗು ವಿತರಿಸಿದ ವೈದ್ಯರು ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದ್ದು, ಕಿಮ್ಸ್ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವೈದ್ಯರ ನಿರ್ಲಕ್ಷ್ಯದ ಬಗ್ಗೆ

https://fb.watch/nbq4g-Cj80/?mibextid=RUbZ1f

ಕುಟುಂಬಸ್ಥರು ಹೇಳಿದ್ದೇನು ಅಂತೀರಾ ಇಲ್ಲಿದೆ ಕೇಳಿ.ಶಿವಪ್ಪ ಪೂಜಾರ (ಮಗುವಿನ ತಂದೆ)ಗದಗ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುತ್ತವ್ವ ಎಂಬ ಬಾಣಂತಿಯ ಮಗುವನ್ನು ಕಿಮ್ಸ್ ವೈದ್ಯರು ಅದಲು ಬದಲು ಮಾಡಿದ್ದು, ಕಳೆದ 15 ದಿನಗಳ ಹಿಂದೆ ಮುತ್ತವ್ವಗೆ ಜನಿಸಿದ್ದ ಗಂಡು‌ಮಗುವನ್ನು ಚಿಕಿತ್ಸೆಗಾಗಿ ಐಸಿಯುನಲ್ಲಿ ಇಟ್ಟಿದ್ದಾರೆ. ಜನನ ದಾಖಲೆಯಲ್ಲಿ ಗಂಡು ಮಗು ಅಂತ ದಾಖಲಿಸಿದ್ದರೂ ಕೂಡ ಹೆಣ್ಣು ಮಗವನ್ನು ಕೊಟ್ಟು ಕಿಮ್ಸ್ ವೈದ್ಯರು ಯಡವಟ್ಟು ಮಾಡಿದ್ದಾರೆ. ಶಿವಪ್ಪ ಮುತ್ತವ್ವ ಪೂಜಾರ್ ಎಂಬ ದಂಪತಿಗೆ ಜನಿಸಿದ ಗಂಡು‌ ಮಗವನ್ನು 15 ದಿನಗಳ

ಬಳಿಗೆ ತಾಯಿಗೆ ಹೆಣ್ಣು ಮಗು ನೀಡಿರುವ ಕಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಗಂಡು ಮಗುವಿನ ಬದಲಿಗೆ ಹೆಣ್ಣು ಮಗು ನೀಡಿದ ವೈದ್ಯರು, ಕಳ್ಳಾಟಕ್ಕೆ ಮಗುವಿನ ಪಾಲಕರ ಆಕ್ರೋಶ ವ್ಯಕ್ತಪಡಿಸಿದರು.: ಪುಂಡಲಿಕ ಛಲವಾದಿ ಗ್ರಾಮ ಪಂಚಾಯತಿ ಸದಸ್ಯರುಒಟ್ಟಿನಲ್ಲಿ ಕಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಕಿಮ್ಸ್ ಹೆಸರು ಈಗ ಹಾಳಾಗಿ ಹೋಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಿ ಕಿಮ್ಸ್ ಅವ್ಯವಸ್ಥೆಗೆ ಬ್ರೇಕ್ ಹಾಕಬೇಕಿದೆ.

Share News

About Shaikh BigTv

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *