ತಮಿಳುನಾಡಿನಲ್ಲಿ ಮದುವೆಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟ ಸ್ನೇಹಿತ
ಕುಡಲೋರ್ (ಸೆ. 17): ಸ್ನೇಹಿತರದ್ದೋ, ಕುಟುಂಬದವರದ್ದೋ ಮದುವೆಗೆ ಯಾವ ಉಡುಗೊರೆ ಕೊಡಬೇಕೆಂಬುದೇ ಹಲವರ ತಲೆಬಿಸಿ. ಇಲ್ಲೊಬ್ಬ ತನ್ನ ಗೆಳೆಯನ ಮದುವೆಗೆ 5 ಲೀಟರ್ ಪೆಟ್ರೋಲ್ ಉಡುಗೊರೆ ನೀಡುವ ಮೂಲಕ ಶುಭಾಶಯ ಕೋರಿದ್ದಾನೆ.
ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿರುವುದಿಂದ ಉಡುಗೊರೆಯಾಗಿ ಪೆಟ್ರೋಲ್ ಕ್ಯಾನ್ ನೀಡಿದ್ದಾನೆ ತಮಿಳುನಾಡಿನ ವ್ಯಕ್ತಿ. ಇದರಿಂದ ಒಮ್ಮೆ ಆಶ್ಚರ್ಯಕ್ಕೀಡಾದ ಮದುಮಗ ನಂತರ ಸುಧಾರಿಸಿಕೊಂಡು ಉಡುಗೊರೆಯನ್ನು ಪಡೆದುಕೊಂಡಿದ್ದಾನೆ. ಈ ವಿಡಿಯೋ ಕ್ಲಿಪ್ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಸದ್ಯದ ಪರಿಸ್ಥಿತಿಯನ್ನು ಗೇಲಿ ಮಾಡುವಂತಿದೆ.
ಹಿಂದೊಮ್ಮೆ ಈರುಳ್ಳಿ ಬೆಲೆ ಶತಕ ಬಾರಿಸುವ ಸನ್ನಾಹದಲ್ಲಿದ್ದಾಗ ಗೆಳೆಯರೆಲ್ಲ ಸೇರಿ ತಮ್ಮ ಸ್ನೇಹಿತನ ಮದುವೆಯಲ್ಲಿ ಈರುಳ್ಳಿ ಹಾರ ಮಾಡಿಸಿ ಹಾಕಿ ತಮ್ಮ ದುಬಾರಿ ಸ್ನೇಹ’ವನ್ನು ಸಾಬೀತುಪಡಿಸಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
ತಮಿಳುನಾಡಿನಲ್ಲಿ ಪೆಟ್ರೋಲ್ ದರ ಲೀಟರ್ಗೆ 85.15 ರೂ. ಆಗಿದೆ. ಈ ಹಿನ್ನೆಲೆಯಲ್ಲಿ 5 ಲೀಟರ್ನ ಪೆಟ್ರೋಲ್ ನೀಡಿದ್ದಾಗಿ ಸ್ನೇಹಿತ ಹೇಳಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





