ಸಿಲ್ವರ್ ಟೌನ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಬಿಗ್ ಟಿವಿಗೆ ಬಳಿಯಿದೆ exclusive ವಿಡಿಯೋ
ಹುಬ್ಬಳ್ಳಿಯ ಯುವಕನ ಕೊಲೆ ಪ್ರಕರಣ: ನಿನ್ನೆ ನಕ್ಕವ ಇಂದು ನೇಣಿಗೆ ಶರಣು… ಹುಬ್ಬಳ್ಳಿಯುವಕನೊಬ್ಬನ ಭೀಕರ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ಹುಬ್ಬಳ್ಳಿಯ ಸಿಲ್ವರ್ ಟೌನ್‌ನಲ್ಲಿ ಮೌಲಾಲಿ ಎನ್ನುವ ಯುವಕನ ಕೊಲೆ ಮಾಡಿದ ಆರೋಪಿಪರಸಪ್ಪ ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿರುವ ಗಿಡದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ನಿನ್ನೆ ಕೊಲೆಯಾದ ಸ್ಥಳದಲ್ಲಿ ಇದ್ದ ಪರಸಪ್ಪ ಮಾದ್ಯಮಗಳಿಗೆ ನಗುನಗುತ್ತಲೆ ಉತ್ತರ ನೀಡಿದ್ದ. Big tv ಪತ್ರಕರ್ತ ಶೇಖ್ ಅವರು ಏನಾಗಿದೆ ಸರ್ ಅಂದಾಗ ಆಹಾ.. ಎಂದು ನಕ್ಕಿದ್ದ. ಆದ್ರೆ ಇಂದು ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ನಕ್ಕಿದವ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ಪ್ರಶ್ನೆ ಕಾಡುತ್ತಿದೆ ಅಷ್ಟೊಂದು ನಿರಾಳವಾಗಿದ್ದ. ಯಾವುದೇ ದುಗುಡ ಆತನ ಮುಖದಲ್ಲಿ ಕಾಣುತ್ತಿರಲಿಲ್ಲ. ಯಾವುದೇ ಅಂಜಿಕೆ, ಆತಂಕ ಕಾಣುತ್ತಿರಲಿಲ್ಲ. ಆದ್ರೆ ಹೇಗೆ ನೇಣಿಗೆ

ಶರಣಾಗಿದ್ದಾನೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.ಅದಲ್ಲದೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಈತನ ಕಾಲು ನೆಲ್ಲಕ್ಕೆ ಕಾಲು ತಾಗಿದೆ. ಸಾವಿಗೆ ಕಾರಣ ಏನು ಎಂಬುದನ್ನು ಪೊಲೀಸ್ ಇಲಾಖೆಯ ತನಿಖೆಯಿಂದ ಹೊರ ಬರಬೇಕಿದೆ. ಮೃತ ಪರಸಪ್ಪ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿಯಾಗಿದ್ದು, ಕುಟುಂಬದ ಜೊತೆಗೆ ನಿರ್ಮಾಣ
ಹಂತದಲ್ಲಿ ಕಟ್ಟಡದಲ್ಲಿ ವಾಸವಿದ್ದ. ಪರಸಪ್ಪನ ಮಗಳ ಜೊತೆಗೆ ಕೊಲೆಯಾದ ಮೌಲಾಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ವಿವಾಹಿತ ಮಗಳ ಮೌಲಾಲಿ

ಅನೈತಿಕ ಇಟ್ಟುಕೊಂಡಿದ್ದರಿಂದ ಪರಸಪ್ಪ ಕುಪಿತಗೊಂಡು, ನಿನ್ನೆ ಕೊಲೆ ಮಾಡಿ ಇಂದು ನೇಣು ಹಾಕಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಈ ಸಂಬಂಧಿಸಿದಂತೆ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

