Breaking News

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ತಾಳ್ಮೆಯ ಬ್ಯಾಟಿಂಗ್ ಮಾಡುವ ಮೂಲಕ ಭಾರತವನ್ನು ಸೋಲಿನ ಸುಳಿಯಿಂದ ರಕ್ಷಿಸಿದರು…

ಭಾನುವಾರ ಚೆನ್ನೈನ ಎಂಎ ಚಿದಂಬರಂ ಅಂಗಳದಲ್ಲಿ ನಡೆದ 2023 ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತದ ಸ್ಪಿನ್ ದಾಳಿಗೆ ಸಿಕ್ಕು 199 ರನ್‌ಗಳಿಗೆ ಆಲೌಟ್ ಆಯಿತು.

200 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ 2 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕರಾದ ಇಶಾನ್ ಕಿಶನ್, ರೋಹಿತ್ ಶರ್ಮಾ ಸೊನ್ನೆಗೆ ಔಟಾದರೆ, ನಂತರ ಬಂದ ಶ್ರೇಯಸ್ ಅಯ್ಯರ್ ಕೂಡ ಸೊನ್ನೆಗೆ ಔಟಾದರು.

ಮೂವರು ಸೊನ್ನೆಗೆ ಔಟಾದ ನಂತರ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ತಾಳ್ಮೆಯ ಬ್ಯಾಟಿಂಗ್ ಮಾಡುವ ಮೂಲಕ ಭಾರತವನ್ನು ಸೋಲಿನ ಸುಳಿಯಿಂದ ರಕ್ಷಿಸಿದರು. ವಿರಾಟ್ ಕೊಹ್ಲಿ ಒಂದು ಜೀವದಾನ ಪಡೆದರು, ನಂತರ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ಕೆಎಲ್ ರಾಹುಲ್ ಕೂಡ ಎಚ್ಚರಿಕೆಯಿಂದ ಯಾವ ತಪ್ಪಿಗೂ ಅವಕಾಶ ಕೊಡದೆ ರನ್ ಗಳಿಸಿದರು.

Share News

About BigTv News

Check Also

ಕೆಕೆಆರ್ ವಿರುದ್ಧ ವಿರಾಟ್‌ ಕೊಹ್ಲಿ ಐತಿಹಾಸಿಕ ದಾಖಲೆ.

ಐಪಿಎಲ್‌ 18ನೇ ಆವೃತ್ತಿಯ ಆರಂಭಿಕ ಪಂದ್ಯ ಮುಕ್ತಾಯವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಆರ್‌ಸಿಬಿ ಸಲಭವಾಗಿ ಮಣಿಸಿದೆ. ಇದೇ ವೇಳೆ …

Leave a Reply

Your email address will not be published. Required fields are marked *