Breaking News

ಕರ್ನಾಟಕ ಕೂಡ ಈ ಬಾರಿ ನೀರು ಬಿಡಲೇ ಬಾರದು ಅಂತಾ ನಿರ್ಧಾರ ಮಾಡಿದೆ ಮತ್ತೆ ಬಂದ್‌ಗೆ ಕರೆ ನೀಡಲಾಗಿದೆ.

ಕಾವೇರಿ ನೀರಿನ ಗಲಾಟೆ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅದರಲ್ಲೂ ಈಗಾಗಲೇ ಈ ಕಾರಣಕ್ಕೆ ಕನ್ನಡಿಗರು 2 ಬಂದ್‌ಗಳನ್ನ ನೋಡಿದ್ದಾರೆ. ಮೊದಲು ರಾಜಧಾನಿ ಬೆಂಗಳೂರಿನ ಬಂದ್ ಜನರನ್ನು ಸಂಕಷ್ಟಕ್ಕೆ ದೂಡಿತ್ತು. ನಂತರ ಕರ್ನಾಟಕ ಕೂಡ ಬಂದ್ ಆಗಿತ್ತು. ಈ ಎರಡೂ ಬಂದ್‌ಗಳ ಬಳಿಕ ಕಾವೇರಿ ನೀರಿಗಾಗಿ ಮತ್ತೊಮ್ಮೆ ಬಂದ್‌ಗೆ ಕರೆ ನೀಡಲಾಗಿದೆ. ಅರೆ ಮತ್ತೊಂದು ಬಂದ್? ಯಾವಾಗ?

ಹೌದು, ಕಾವೇರಿ ನದಿ ಪಾತ್ರದಲ್ಲಿ ಈ ಬಾರಿ ಅಗತ್ಯ ಇರುವಷ್ಟು ಮಳೆ ಬಿದ್ದಿಲ್ಲ. ಹೀಗಾಗಿ ನೀರಿಗಾಗಿ ಭಾರಿ ಕೊರತೆ ಎದುರಾಗಿದೆ. ಅದ್ರಲ್ಲೂ ಕರ್ನಾಟಕದ ಕಾವೇರಿ ಕೊಳ್ಳ ಭಾಗದಲ್ಲಿ ನೀರು ಇಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಈ ಸಮಯದಲ್ಲೇ ತಮಿಳುನಾಡು ಸರ್ಕಾರವೂ ಕಾವೇರಿ ನೀರಿಗಾಗಿ ಕಿರಿಕ್ ತೆಗೆದಿದೆ. ಹೀಗಾಗಿ ಕರ್ನಾಟಕದಲ್ಲಿ ಬರ ಇದ್ದರೂ ಆರಂಭದಲ್ಲಿ ಹತ್ತಾರು ಟಿಎಂಸಿ ನೀರು ಬಿಟ್ಟಿತ್ತು ಕರ್ನಾಟಕ ಸರ್ಕಾರ. ಆದ್ರೆ ಮತ್ತೆಮತ್ತೆ ಕಾವೇರಿ ನೀರು ಬಿಡುವಂತೆ ತಮಿಳುನಾಡು ಒತ್ತಡ ಹೇರಿದ್ದು, ಕರ್ನಾಟಕ ಕೂಡ ಈ ಬಾರಿ ನೀರು ಬಿಡಲೇ ಬಾರದು ಅಂತಾ ನಿರ್ಧಾರ ಮಾಡಿದೆ. ಈ ಸಮಯಕ್ಕೇ ಮತ್ತೆ ಬಂದ್‌ಗೆ ಕರೆ ನೀಡಲಾಗಿದೆ.

Share News

About BigTv News

Check Also

ವೆನ್ನಿಲಾ ಕೊಲೆ ಪ್ರಕರಣ. ಕಾಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್..

ಬೆಂಗಳೂರು: ವೆನ್ನಿಲಾ ಕೊಲೆ ಪ್ರಕರಣ – ಕಾಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್ ಬೆಂಗಳೂರು ನಗರದ …

Leave a Reply

Your email address will not be published. Required fields are marked *