Breaking News

ದೇಶದಲ್ಲಿ ಹಬ್ಬದ ಸಂಭ್ರಮ ಆದರೆ ಈ ಗ್ರಾಮದಲ್ಲಿ ಇಲ್ಲಾ ಹಬ್ಬದ ಸಂಭ್ರಮ….

ದಾವಣಗೆರೆ: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿದೆ. ಎಲ್ಲರೂ ಹಬ್ಬದ ಖುಷಿಯಲ್ಲಿದ್ದಾರೆ. ಹಬ್ಬವೂ ಜೋರಾಗಿದೆ. ಖರೀದಿಯೂ ಬಿರುಸು ಪಡೆದಿದೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಬೆಳಕಿನ ಹಬ್ಬದ ಸಡಗರ, ಸಂಭ್ರಮ ಕಂಡು ಬರುವುದಿಲ್ಲ. ಯಾಕೆ ಎನ್ನುವುದದೇ ಕುತೂಹಲ.ಕತ್ತಲೆ ಹೋಗಲಾಡಿಸಿ ಬೆಳಕು ತರುವ ಹಬ್ಬವೇ ದೀಪಾವಳಿ. ದೀಪದಿಂದ ದೀಪವಾ ಹಚ್ಚಬೇಕು ಮಾನವ ಎಂಬಂತೆ ದೀಪಗಳನ್ನು ಹಚ್ಚಿ ಎಲ್ಲರೂ ಖುಷಿಪಡುತ್ತಾರೆ. ಮಣ್ಣಿನಿಂದ ಮಾಡಿದ, ತರಹೇವಾರಿ ದೀಪಗಳನ್ನು ಹಚ್ಚಿ ಹಬ್ಬವನ್ನು ಖುಷಿಖುಷಿಯಾಗಿ ಎಲ್ಲರೂ ಆಚರಿಸುತ್ತಾರೆ. ಈ ಗ್ರಾಮದಲ್ಲಿ ಪಟಾಕಿ ಶಬ್ಧ ಕೇಳಿ ಬರೋದಿಲ್ಲ. ಮಕ್ಕಳಿಗೂ ಪಟಾಕಿ ಅಂದರೆ ಅಚ್ಚುಮೆಚ್ಚು. ಆದರೆ ಈ ಗ್ರಾಮದ ಮಕ್ಕಳು ಪಟಾಕಿಯನ್ನೇ ಸುಡುವಂತಿಲ್ಲ.ಇಲ್ಲಿ ನಾಲ್ಕೈದು ತಲೆಮಾರುಗಳಿಂದ ಹಬ್ಬದ ಆಚರಣೆ ಇಲ್ಲ. ಇದಕ್ಕೆ ಕಾರಣಗಳನ್ನೂ ಗ್ರಾಮಸ್ಥರು ನೀಡುತ್ತಾರೆ. ಅಂದ ಹಾಗೆ ದೀಪಾವಳಿ ರಂಗು ಇಲ್ಲದ ಗ್ರಾಮ ಇರೋದು ದಾವಣಗೆರೆ ತಾಲೂಕಿನಲ್ಲಿ. ಲೋಕಿಕೆರೆ ಗ್ರಾಮದಲ್ಲಿ ನೂರಾರು ವರ್ಷಗಳಿಂದ ದೀಪಾವಳಿ ಆಚರಿಸುತ್ತಿಲ್ಲ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *