Breaking News
Featured Video Play Icon

ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಪ್ರಲ್ಲಾದ್ ಜೋಶಿ…..

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತರಿಗೆ ಅನಾವಶ್ಯಕ ತೊಂದರೆ ನೀಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡದಲ್ಲಿ ಬೆವರಿಳಿಸಿದ್ದಾರೆ.ಧಾರವಾಡದ ಗೊಲ್ಲರ ಓಣಿ ನಿವಾಸಿ ರವಿ ಗೊಲ್ಲರ ಎಂಬುವವರು ಕಟ್ಟರ್ ಬಿಜೆಪಿ ಕಾರ್ಯಕರ್ತ. ಕಾಂಗ್ರೆಸ್ ಅಧಿಕಾರಕ್ಕೆ ಬಂತ ತಕ್ಷಣ ಅಲ್ಲಿನ‌ ಕೆಲವರ ಮಾತು ಕೇಳಿಕೊಂಡು ರವಿ ಮೇಲೆ ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್ ಕಾಡದೇವರಮಠ ಕೆಂಡ ಕಾರುತ್ತಿದ್ದಾರೆ. ಸುಮ್ಮ ಸುಮ್ಮನೆ ಠಾಣೆಗೆ ಕರೆಸಿ, ಇಲ್ಲ ಸಲ್ಲದ ಆರೋಪ ಹೊರಿಸಿ ಮನಬಂದಂತೆ ಥಳಿಸಿದ್ದಾರೆ. ಈದೇ ಕಾರಣದ ಹಿನ್ನೆಲೆಯಲ್ಲಿ ಜೋಶಿ ಅವರನ್ನು





ಭೇಟಿಯಾದ ರವಿ ನೇತೃತ್ವದ ತಂಡ ಅವರಿಗೆ ನಡೆದ ಘಟನೆ ಬಗ್ಗೆ ವರದಿ ಒಪ್ಪಿಸಿದರು.ಇದನ್ನು ಕೇಳಿದ ಜೋಶಿ ಕೆಂಡಾಮಂಡಲವಾದರು. ಕಾಡದೇವರಮಠ ಅವರನ್ನು ಕರೆಯಿಸಿ ಬೆವರಿಳಿಸಿದರು. ಈ ಬಗ್ಗೆ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು. ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು

ಎಂದು ಜೋಶಿ ಎಚ್ಚರಿಕೆ ನೀಡಿದರು.ನಮ್ಮ ಬಳಿ ಅಧಿಕಾರ ಇದ್ದಾಗ ಒಂದು ರೀತಿ ಇರ್ತಿರಿ. ಈಗ ಮತ್ತೊಂದು ರೀತಿ ಇರ್ತೀರಾ ಪೊಲೀಸ್ ಠಾಣೆಯೊಳಗೆ ಹೊಡೆಯೋದಕ್ಕೆ ನಿಮಗೇನು ಹಕ್ಕಿದೆ ಎಂದು ಪೊಲೀಸ್ ಅಧಿಕಾರಿಯನ್ನು ಜೋಶಿ ತರಾಟೆಗೆ ತೆಗೆದುಕೊಂಡರು.ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿ ಬೇಡ ಅನ್ನಲ್ಲ ಆದರೆ ಅನಾವಶ್ಯಕವಾಗಿ ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದರು.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *