Breaking News

ದೆಹಲಿಯಲ್ಲಿ ರಾತ್ರಿ ವೇಳೆ ಮಹಿಳೆಗೆ ಬಸ್ ಪ್ರಯಾಣ ಅಸುರಕ್ಷಿತ: ವರದಿ

ನವದೆಹಲಿ: ದೆಹಲಿ ಸರ್ಕಾರ ಮಹಿಳೆಯರಿಗಾಗಿ ಪಿಂಕ್ ಟಿಕೆಟ್ ಯೋಜನೆಯಡಿ ಉಚಿತ ಬಸ್‌ ಪ್ರಯಾಣದ ಸೌಲಭ್ಯ ಒದಗಿಸಿದ್ದು, 100 ಕೋಟಿ ಟಿಕೆಟ್‌ಗಳ ಬಳಕೆಯಾಗಿ ದಾಖಲೆ ಸೃಷ್ಟಿಸಿದರೂ ಮಹಿಳಾ ಸುರಕ್ಷತೆ ಇಲ್ಲ ಎಂದು ವರದಿಯೊಂದು ಹೇಳಿದೆ.
ಗ್ರೀನ್‌ಪೀಸ್ ಇಂಡಿಯಾ ಬಿಡುಗಡೆ ಮಾಡಿರುವ ರೈಡಿಂಗ್ ದಿ ಜಸ್ಟೀಸ್ ರೂಟ್ ವರದಿಯಲ್ಲಿ ಈ ಅಂಶ ಗಮನಸೆಳೆದಿದೆ.
ಶೇ 77ರಷ್ಟು ಮಹಿಳೆಯರು ಕತ್ತಲಾದ ನಂತರ ಬಸ್‌ಗಳಲ್ಲಿ ಪ್ರಯಾಣಿಸುವಾಗ ಅಸುರಕ್ಷಿತ ಭಾವನೆಯನ್ನು ಅನುಭವಿಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಸಮೀಕ್ಷೆಗೆ ಒಳಗಾದ ಶೇ 75ರಷ್ಟು ಮಹಿಳೆಯರು ದೆಹಲಿ ಸರ್ಕಾರದ ಪಿಂಕ್ ಟಿಕೆಟ್(ಶುಲ್ಕ ರಹಿತ ಪ್ರಯಾಣ) ಯೋಜನೆಯಿಂದ ಗಮನಾರ್ಹ ಉಳಿತಾಯವನ್ನು ಕಂಡಿದ್ದಾರೆ ಎಂದು ವರದಿ ತಿಳಿಸಿದೆ.
ಈ ಯೋಜನೆ ಪ್ರಾರಂಭವಾದ ನಂತರ ಸಾರ್ವಜನಿಕ ಸಾರಿಗೆ ಬಳಸುವ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ಎಂದು ಹೇಳಿದೆ.
ಅದಾಗ್ಯೂ, ಬಸ್‌ಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಿದ್ದು, ಬಸ್‌ಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದಿರುವುದು ಮತ್ತು ಸರಿಯಾದ ಸಮಯಕ್ಕೆ ಬಸ್‌ ಬಾರದೇ ಇರುವುದು ಮಹಿಳೆಯರಲ್ಲಿ ಅಸುರಕ್ಷತೆಯ ಭಾವನೆಯನ್ನು ಉಂಟು ಮಾಡಿದೆ ಎಂದು ತಿಳಿಸಿದೆ.
ಪಿಂಕ್ ಟಿಕೆಟ್ ಯೋಜನೆಯು ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಬೆಂಬಲಿಸಿರುವುದರ ಜೊತೆಗೆ ಖಾಸಗಿ ವಾಹನಗಳ ಬಳಕೆ ತಗ್ಗಿಸಿ ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಮೂಲಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕೊಡುಗೆ ನೀಡಿದೆ ಎಂದು ವರದಿ ಗಮನಿಸಿದೆ.
ಪಿಂಕ್ ಟಿಕೆಟ್ ಯೋಜನೆಯಡಿ ದೆಹಲಿಯ ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಟಿಕೆಟ್‌ ನೀಡಲಾಗುತ್ತದೆ. ಮಹಿಳೆಯರು ಬಯಸಿದ್ದಲ್ಲಿ ಟಿಕೆಟ್‌ಗಳನ್ನು ಖರೀದಿಸುವ ಆಯ್ಕೆಯನ್ನು ನೀಡಲಾಗಿದೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *