Breaking News

ಬೆಂಡಿಗೇರಿ ಪೋಲೀಸ್ ಪವರ್ ; 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್…

28ವರ್ಷಕ್ಕೆ ಒಂದು ಲೆಕ್ಕ ಇನ್ಮುಂದೆ ಒಂದು ಲೆಕ್ಕ..!! 28 ವರ್ಷದ ಕಳ್ಳಾಟಕ್ಕೆ ಫುಲ್ ಸ್ಟಾಪ್ ಆರೋಪಿ ಅಂದರ್ ಮಾಡಿದ ಪೋಲಿಸ್ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ತಂಡ..!!

ಹುಬ್ಬಳ್ಳಿ:- ಛೋಟಾ ಬಾಂಬೆಯ ಆರಕ್ಷಕರ ಕಾರ್ಯಕ್ಕೆ ಅವಳಿನಗರ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರೋಬ್ಬರಿ 28 ವರ್ಷಗಳ ಹಿಂದಿನ ಕಹಾನಿಗೆ ಬೆಂಡಿಗೇರಿ ಪೊಲೀಸರು ಮುಕ್ತಿ ನೀಡಿದ್ದಾರೆ. ಪಾಪಿಗಳ ಲೋಕದಲ್ಲಿ ಕರಾಳ ಮುಖವಾಡ ಧರಿಸಿ ತಲೆಮರಿಸಿಕೊಂಡು ಅಲೆದಾಡುತ್ತಿದ್ದ ಆರೋಪಿಯನ್ನ ಠಾಣಾ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ನೇತೃತ್ವದಲ್ಲಿ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ….ಹುಬ್ಬಳ್ಳಿಯ ತಾರಿಹಾಳ ಗ್ರಾಮದ 57 ವರ್ಷದ ಮಹಮ್ಮದ್ ಹೊಸಮನಿ ಎಂಬಾತ 28 ವಷಗಳ ಹಿಂದೆ ಪ್ರಕರಣವೊಂದರಲ್ಲಿ ಜೈಲು

ಸೇರಿದ್ದ.ನಂತರ ಜಾಮೀನಿನ ಮೇಲೆ ಹೊರಗೆ ಬಂದು ನ್ಯಾಯಾಲಯಕ್ಕೂ ಹಾಜರಾಗದೇ ತಪ್ಪಿಸಿ ಅಡ್ಯಾಡುತ್ತಿದ್ದ. ನ್ಯಾಯಾಲಯ LPC ಪ್ರಕರಣ ಅಂತಾ ಪರಿಗಣಿಸಿ ಅವನ ಮೇಲೆ ವಾರೆಂಟ್ ಜಾರಿ ಮಾಡಿತ್ತು.ಆ ಹಿನ್ನೆಲೆಯಲ್ಲಿ ಬೆಂಡಿಗೇರಿ ಪೋಲೀಸರು ಇಂದು ಆರೋಪಿಯನ್ನ ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿ ಪತ್ತೆಗಾಗಿ ಕೆಲಸ ಮಾಡಿದ ಟೀಂಗೆ

ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅಭಿನಂದನೆ ಸಲ್ಲಿಸಿದ್ದಾರೆ….

Share News

About Shaikh BigTv

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *