Breaking News

ಅಡ್ಡಾದಿಡ್ಡಿ ಹರಿದ ಸಾರಿಗೆ ವಾಹನ :ಒಬ್ಬ ಸ್ಥಳದಲ್ಲೆ ದುರ್ಮರಣ ಇನ್ನೊಬ್ಬನ ಸ್ಥಿತಿ ಚಿಂತಾಜನಕ


ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ನ
ನಮ್ಮ ಜಲ ನಮ್ಮ ನೀರು ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ಮೈದಾನದ ಹತ್ತಿರ ಭಾರಿ ಅವಘಡ ಸಂಭವಿಸಿದೆ..

ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ಅಶೋಕ ಹೊಟೇಲ್ ಹತ್ತಿರ ಸಾರಿಗೆ ಸಂಸ್ಥೆಯ ಬಸ್ಸ ಅಡ್ಡಾದಿಡ್ಡಿ ಹರಿದು ಒಬ್ಬ ಸ್ಥಳದಲ್ಲೆ ಮೃತ ಪಟ್ಟಿದ್ದು ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ

ಸಮಾವೇಶ ನಡೆಯುವ 100 ಮೀಟರ್‌ ಅಳತೆಯ ಅಂತರದಲ್ಲಿ ಈ ಘಟನೆ ನಡೆದಿದ್ದು ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಸಮಾವೇಶ ಕ್ಕೆ ಜನಜಂಗುಳಿ ಸೇರಿದ್ದು ನಗರದಲ್ಲಿ ಅತೀ ವೇಗದಲ್ಲಿ ಬಸ್ ಚಲಾವಣೆ ಮಾಡಿ ಅವಘಡಕ್ಕೆ ಕಾರಣನಾದ ಚಾಲಕ ತಕ್ಷಣ ಆ ಸ್ಥಳದಿಂದ ಪರಾರಿ ಆಗಿದ್ದು
KA42 F 1076 ಸಂಖ್ಯೆಯ
ಸಾರಿಗೆ ವಾಹನ‌ ಗದಗದಿಂದ ಹುಬ್ಬಳ್ಳಿ ಗೆ ಆಗಮಿಸುವ ಬಸ್ಸ ಇದಾಗಿದೆ..

ಕೇಶ್ವಾಪೂರ ಪೂರ್ವ ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು
ಸ್ಥಳಕ್ಕೆ ಕೇಶ್ವಾಪೂರದ ಪೂರ್ವ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಎನ್ ಸಿ ಕಾಡದೇವರ ಬೇಟಿ ನೀಡಿ ಅವಘಡ ಸಂಬಂಧಿಸಿದ ಸ್ಥಳದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ..

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *