Breaking News

ಸಾಕಿದ್ದ ಸಿಂಹದಿಂದಲೇ ವ್ಯಕ್ತಿ ಬಲಿ ; ದಾಳಿ ಮಾಡಿ ಕಚ್ಚಿತಿಂದ ಪ್ರಾಣಿ! !

ಅಖಿಲ್ ಫಖರ್ ಅಲ್-ದಿನ್ ಎಂಬ 50 ವರ್ಷದ ವ್ಯಕ್ತಿಯೊಬ್ಬರು ತಾವು ಸಾಕಿದ್ದ ಸಿಂಹದ ದಾಳಿಗೆ ಬಲಿಯಾಗಿದ್ದಾರೆ. ಅಲ್-ಬರಾಕಿಯಾ ಜಿಲ್ಲೆಯ ಜನರು ಈ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.ಹೊಸದಾಗಿ ತಂದಿದ್ದ ಸಿಂಹವನ್ನು ಪಳಗಿಸುವ ಪ್ರಯತ್ನದಲ್ಲಿದ್ದಾಗಲೇ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.ಅಲ್-ಘದ್ ಪತ್ರಿಕೆಯ ವರದಿಗಳ ಪ್ರಕಾರ, ಅಲ್-ದಿನ್ ಸಿಂಹದ ಪಂಜರದ ಬಳಿ ಹೋದಾಗ ಅದು ಹಠಾತ್ ದಾಳಿ ಮಾಡಿದೆ. ಸಿಂಹವು ಅವರ ಕುತ್ತಿಗೆ ಮತ್ತು ಎದೆಗೆ ಕಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿ ತಕ್ಷಣವೇ ಅವರು ಮೃತಪಟ್ಟಿದ್ದಾರೆ. ನಂತರ ಸಿಂಹವು ಅವರ ದೇಹದ ಬಹುಭಾಗವನ್ನು ತಿಂದಿದೆ ಎಂದು ಹೇಳಲಾಗಿದೆ. ಮೃತದೇಹವನ್ನು ವಿಧಿವಿಜ್ಞಾನ ಇಲಾಖೆಗೆ ರವಾನಿಸಲಾಗಿದೆ. ಘಟನೆಯ ನಂತರ ಸಿಂಹವು ರಕ್ತದ ಮಡುವಿನಲ್ಲಿ ಬಿದ್ದಿರುವ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *