Breaking News

ಇಂಡಿಯಾ ಪದದ ಬದಲಿಗೆ ಭಾರತ್ ಎಂದು ಬದಲಿಸಿದೆ…

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತನ್ನ ಅಧಿಕೃತ ಲೋಗೋವನ್ನು ಬದಲಾಯಿಸಿದ್ದು, ಇಂಡಿಯಾ ಪದದ ಬದಲಿಗೆ ಭಾರತ್ ಎಂದು ಬದಲಿಸಿದೆ ಅಲ್ಲದೆ ರಾಷ್ಟ್ರೀಯ ಲಾಂಛನದ ಬದಲಿಗೆ ಆಯುರ್ವೇದದ ದೇವರಾದ ಧನ್ವಂತರಿಯ ಪೋಟೋವನ್ನು ಸೇರಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ವೃತ್ತಿಪರರನ್ನು ನಿಯಂತ್ರಿಸುವ 33 ಸದಸ್ಯರ ಭಾರತೀಯ ನಿಯಂತ್ರಕ ಸಂಸ್ಥೆಯಾಗಿದೆ. ಈ ಕ್ರಮವು ದೇಶದ ಉನ್ನತ ವೈದ್ಯಕೀಯ ನಿಯಂತ್ರಕ ಸಂಸ್ಥೆ ರಾಷ್ಟ್ರೀಯ ಲಾಂಛನವನ್ನು ಕೈಬಿಟ್ಟಿರುವುದು ವಿವಾದವನ್ನು ಹುಟ್ಟುಹಾಕಿದೆ. ಆದರೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಸಮರ್ಥಿಸಿಕೊಂಡಿದ್ದು, ಇದನ್ನು ಕೆಲವೊಮ್ಮೆ ಆಯೋಗದ ಪ್ರತಿನಿಧಿ ಚಿತ್ರವಾಗಿ ಬಳಸಲಾಗುತ್ತಿತ್ತು. ಲೋಗೋಗೆ ಧಾರ್ಮಿಕತೆಯನ್ನು ಸೇರಿಸಲಾಗಿದೆ. ಆದರೆ ಧನ್ವಂತರಿಯ ಕಪ್ಪು ಬಿಳುಪು ರೇಖಾಚಿತ್ರವು ಈಗಾಗಲೇ ತನ್ನ ಹಳೆಯ ಲೋಗೋದ ಭಾಗವಾಗಿದೆ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿದೆ.

Share News

About BigTv News

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *