Breaking News

ವೇಗದಲ್ಲಿ ತ್ರಿಪುರ ಸುಂದರಿ ಹಾಗೂ ಪುಣ್ಯವತಿ ಧಾರಾವಾಹಿ ಮುಗಿಯುತ್ತಾ…?

ಬಿಗ್ ಬಾಸ್ ಸೀಸನ್ 10 ಇನ್ನು ನಾಲ್ಕೈದು ದಿನಗಳಲ್ಲಿ ಆರಂಭವಾಗಲಿದ್ದು ಅದರ ಸಮಯವನ್ನು ಸಹ ಬದಲಾವಣೆ ಮಾಡಲಾಗಿದೆ. ರಾತ್ರಿ 9.30ಕ್ಕೆ ಬಿಗ್ ಬಾಸ್ ಶುರುವಾಗುವುದರಿಂದ ಬಂದಷ್ಟೇ ವೇಗದಲ್ಲಿ ತ್ರಿಪುರ ಸುಂದರಿ ಹಾಗೂ ಪುಣ್ಯವತಿ ಧಾರಾವಾಹಿ ಮುಗಿಯುತ್ತಾ ಅಥವಾ ಬೇರೆ ಸಮಯದಲ್ಲಿ ಪ್ರಸಾರ ಕಾಣಲಿದ್ಯಾ ಎಂಬುದು ಪ್ರೇಕ್ಷಕರ ಪ್ರಶ್ನೆಯಾಗಿದೆ. ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯವರು ಯಾವುದೇ ಸುಳಿವನ್ನು ಬಿಟ್ಟು ಕೊಟ್ಟಿಲ್ಲ. ಧಾರಾವಾಹಿಗಳು ಮುಗಿಯುತ್ತಾ ಅಥವಾ ಬೇರೆ ಸಮಯದಲ್ಲಿ ಧಾರಾವಾಹಿಗಳನ್ನ ಹಾಕಲಾಗುತ್ತಾ ಎಂಬುದರ ಬಗ್ಗೆ ಏನು ಇಂದಿಗೂ ತಿಳಿಸಲಿಲ್ಲ.

ಆದರೆ, ಪ್ರೇಕ್ಷಕರು ಮಾತ್ರ ಗೀತಾ ಹಾಗೂ ಲಕ್ಷಣ ಧಾರಾವಾಹಿಗಳು ಮುಗಿಯಲಿದ್ದು, ತ್ರಿಪುರ ಸುಂದರಿ ಹಾಗೂ ಪುಣ್ಯವತಿ ಧಾರಾವಾಹಿಯನ್ನು ಬೇರೆ ಸಮಯದಲ್ಲಿ ಹಾಕುತ್ತಾರೆ ಎಂದುಕೊಂಡಿದ್ದಾರೆ. ಗೀತಾ ಧಾರಾವಾಹಿಯಲ್ಲಿ ವಿಜಯ್‌ಗೆ ತನ್ನ ಮಲತಾಯಿ ಭಾನುಮತಿಯೇ ವಿಲನ್ ಎಂಬುದು ಗೊತ್ತಾಗಿದೆ. ಹಾಗಾಗಿ ಸದ್ಯಕ್ಕೆ ಧಾರಾವಾಹಿ ಮುಗಿಯುತ್ತದೆ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ. ಸದ್ಯಕ್ಕೆ ಗೀತಾ ಧಾರಾವಾಹಿ ತಂಡದಿಂದ ಸಹ ಧಾರಾವಾಹಿ ಮುಗಿಯುತ್ತದೆ ಎಂಬ ಸುಳಿವು ಸಿಕ್ಕಿಲ್ಲ. ಇನ್ನು ಸಹ ಧಾರಾವಾಹಿ ಎಪಿಸೋಡ್‌ಗಳು ಇವೆ ಎಂಬಂತೆ ಬಿಂಬಿಸಲಾಗಿದೆ.

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *