ಚಿಕ್ಕೋಡಿ:ಕಳೆದ ಕೆಲ ದಿನಗಳಿಂದ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬರಿತ್ತಿದ್ದು, ನೀರಿನ ಮಟ್ಟದಲ್ಲಿ ಇಂದು ಮತ್ತೆ ಏರಿಕೆ ಉಂಟಾಗಿದೆ. ರಾಯಬಾಗ ತಾಲೂಕಿನ ಕುಡಚಿ – ಉಗಾರ ಸೇತುವೆ ಹಾಗೂ ಜಮಖಂಡಿ- ಮಿರಜ ರಾಜ್ಯ ಹೆದ್ದಾರಿ ಮೇಲಿನ ಸೇತುವೆಗಳು ಮುಳುಗಡೆಯಾಗಿದ್ದು,ಚಿಕ್ಕೋಡಿ ತಾಲೂಕಿನ ಆರು ಸೇತುವೆ ಜಲಾವೃತ ಸ್ಥಿಥಿ ಮುಂದುವರಿಕೆಯಾಗಿದೆ.ಅಲ್ಲದೇ ಕುಡಚಿ – ಉಗಾರ, ಕಲ್ಲೋಳ- ಯಡೂರ,ಮಲಿಕವಾಡ- ದತ್ತವಾಡ,ಸೇರಿದಂತೆ 7 ಸೇತುವೆಗಳು ಮುಳುಗಡೆಯಾಗಿವೆ.ದೂದಗಂಗಾ, ವೇದಗಂಗಾ, ಕೃಷ್ಣಾ , ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮುಳುಗಡೆಯಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಹೀಗಾಗಿ ಪ್ರಯಾಣಿಕರು ಪರ್ಯಾಯ ಮಾರ್ಗಗಳಿಂದ ಸಂಚರಿಸುತ್ತಿರುವ ಚಿತ್ರಣ ಕಂಡು ಬರುತ್ತಿದೆ. ದಿನದಿಂದ ದಿನಕ್ಕೆ ಮತ್ತೆ ಕೃಷ್ಣಾ ಒಳ ಹರಿವಿನಲ್ಲಿ ಹೆಚ್ಚಳವಾಗುತ್ತಿದ್ದು, ಸಧ್ಯ ಕೃಷ್ಣಾ ನದಿಗೆ1 ಲಕ್ಷ 80 ಸಾವಿರ ಕ್ಯೂಸೇಕ್ ನೀರು ಹರಿದು ಬರುತ್ತಿದೆ.ಎರಡು ಲಕ್ಷ ಕ್ಯೂಸೆಕ್ ದಾಟಿದ್ದಲ್ಲಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ನದಿ ತೀರದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





