ಕನ್ನಡಿಗ ಕ್ರಿಕೆಟಿಗ ಕೆ.ಎಲ್ ರಾಹುಲ್, ರೂ.1.5 ಕೋಟಿ ಮೌಲ್ಯದ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿಯನ್ನು ಖರೀದಿಸಿದ್ದಾರೆ ವಿಶ್ವಕಪ್ನಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರು, ರೂ.1.5 ಕೋಟಿ ಮೌಲ್ಯದ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಇತ್ತೀಚಿಗೆ, ಕೆ.ಎಲ್ ರಾಹುಲ್, ಹೊಚ್ಚ ಹೊಸ ಕಪ್ಪು ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿಯಲ್ಲಿ ಕಾಣಿಸಿಕೊಂಡಿದ್ದು, ಆ ವಿಡಿಯೋ ಆನ್ಲೈನ್ ನಲ್ಲಿ ಹರಿದಾಡುತ್ತಿದ್ದು, ಕಾರ್ಸ್ ಫಾರ್ ಯೂ ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಶೇರ್ ಮಾಡಲಾಗಿದೆ. ಸದ್ಯ, ದೇಶದ ಅನೇಕ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ನೆಚ್ಚಿನ ಕಾರಾಗಿ ಈ ಲ್ಯಾಂಡ್ ರೋವರ್ ಡಿಫೆಂಡರ್ ಹೊರಹೊಮ್ಮುತ್ತಿದೆ.
ದೇಶೀಯ ಮಾರುಕಟ್ಟೆಯಲ್ಲಿ ಕೆಲವರ್ಷಗಳ ಹಿಂದೆ, ಲ್ಯಾಂಡ್ ರೋವರ್ ಕಂಪನಿ ಈಗಿನ ತಲೆಮಾರಿನ ‘ಡಿಫೆಂಡರ್’ ಎಸ್ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಡಿಫೆಂಡರ್ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 3-ಡೋರ್ನ ಶಾರ್ಟ್ ವೀಲ್ ಬೇಸ್ (ಎಸ್ಡಬ್ಲ್ಯೂಬಿ), 5-ಡೋರ್ನ ಲಾಂಗ್ ವೀಲ್ ಬೇಸ್ (ಎಲ್ಡಬ್ಲ್ಯೂಬಿ)ನೊಂದಿಗೆ ಲಭ್ಯವಿದೆ. ಎಸ್ಡಬ್ಲ್ಯೂಬಿ ಆವೃತ್ತಿಯನ್ನು ಡಿಫೆಂಡರ್ 90, ಎಲ್ಡಬ್ಲ್ಯೂ ಆವೃತ್ತಿಯನ್ನು ಡಿಫೆಂಡರ್ 110 ಎಂದು ಕರೆಯಲಾಗುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





