ಕೋಲಾರ: ಬಯಲುಸೀಮೆಯಾದ ಕೋಲಾರದಲ್ಲಿ ಸಕಾಲದಲ್ಲಿ ಮಳೆಯಾಗದೆ ರೈತರು ಆಕಾಶದತ್ತ ನೋಡುತ್ತಾ ನಿಟ್ಟುಸಿರು ಬಿಡುತ್ತಿದ್ದರು. ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ ಇದರಿಂದಾಗಿ ಒಣಭೂಮಿಯಲ್ಲಿ ಬೆಳೆದ ಬೆಳೆಗಳು ಒಣಗಿ ಹೋಗುತ್ತಿದ್ದರು.
ಆದರೆ ಕಳೆದ ನಾಲ್ಕೈದು ದಿನಗಳಿಂದ ಹಿಂಗಾರು ಮಳೆ ಚುರುಕಾಗಿದೆ, ಜಿಟಿಜಿಟಿ ಮಳೆ ಸುರಿಯುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಕೋಲಾರದಲ್ಲಿ ಹಲವು ದಿನಗಳಿಂದ ಆಗಾಗ್ಗೆ ಸುರಿಯುತ್ತಿದ್ದ ಮಳೆರಾಯ ಸೋಮವಾರ ಬೆಳಗ್ಗೆ ಸುಮಾರು 6 ಗಂಟೆಗೆ ಪ್ರಾರಂಭವಾದ ಜಡಿ ಮಳೆ ಕೆಲ ಸಮಯ ಬಿಡುವು ನೀಡಿದರೂ ಆಗಾಗ್ಗೆ ಸಂಜೆವರೆಗೂ ಸುರಿದ ಮಳೆಯಿಂದಾಗಿ ಜನರು ಪರದಾಡಬೇಕಾಯಿತು. ನಿರಂತರವಾಗಿ ಸುರಿದ ಜಡಿಮಳೆಯಿಂದ ದಿನನಿತ್ಯ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಿತ್ತು ನಿತ್ಯ ಕೂಲಿಕೆಸಲವನ್ನೇ ನಂಬಿದ್ದವರಿಗೆ ಮಳೆಯಿಂದ ತೀವ್ರ ತೊಂದರೆಯಾಯಿತು. ಪ್ರಮುಖವಾಗಿ ಮಳೆಯಿಂದಾಗಿ ಕಟ್ಟಡ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರ ಕೆಲಸಕ್ಕೆ ತೊಂದರೆಯಾಯಿತು.
ಹಿಂಗಾರು ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳ ಮೇಲೆ ಪ್ರತೀಕೂಲ ವಾತಾವರಣ ನಿರ್ಮಾಣವಾಗಿದೆ ತೇವಾಂಶ ಹೆಚ್ಚಿರುವ ಕಾರಣ ಟೊಮ್ಯಾಟೋ ಬೀನ್ಸ್ ಮತ್ತು ಕ್ಯಾಪ್ಸಿಕಾಂ ತೋಟಗಳಲ್ಲೇ ಕೊಳೆಯಲು ಆರಂಭವಾಗಲಿವೆ. ಹೂಗಳು ತೇವಾಂಶದಿಂದ ಉದುರಿ ಹೋಗುತ್ತಿವೆ. ಕೀಟಬಾದೆ ಹೆಚ್ಚುತ್ತಿದ್ದು ಇದೇ ರೀತಿ ತೇವಾಂಶ ಮುಂದುವರೆದರೆ ಆಲುಗಡ್ಡೆ ಬೆಳೆ ಸಹ ನೆಲಕಚ್ಚಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

