Breaking News

ಪೊಲೀಸರದ್ದು ಇದೆಂಥಾ ಕೆಲಸ.. ನಾಚಿಕೆಯಾಗಲ್ವಾ ಎಂದ ಪಬ್ಲಿಕ್

ಬೆಂಗಳೂರು: ಪೊಲೀಸರಾಗಿ ಇಂಥಾ ಕೆಲಸ ಮಾಡಲು ನಾಚಿಕೆಯಾಗಲ್ವಾ ಎಂದು ಜನರೇ ಪ್ರಶ್ನೆ ಮಾಡುವಂತಹ ಕೆಲಸ ಮಾಡಿದ್ದಾರೆ ಉತ್ತರ ಪ್ರದೇಶದ ಈ ಪೊಲೀಸರು. ಇದು ನಡೆದಿರುವುದು ಉತ್ತರ ಪ್ರದೇಶದ ಅಮ್ರೋಹದಲ್ಲಿ. ನಮ್ಮಲ್ಲಿಯೂ ಬೀದಿ ವ್ಯಾಪಾರಿಗಳಿಂದ ಪೊಲೀಸರು ಸುಲಿಗೆ ಮಾಡುವ ಅನೇಕ ಘಟನೆಗಳನ್ನು ನೋಡಿದ್ದೇವೆ. ಕೆಲವು ಬಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡು ಸಸ್ಪೆಂಡ್ ಆದ ಅಧಿಕಾರಿಗಳೂ ಇದ್ದಾರೆ. ಆದರೆ ಎಲ್ಲಾ ಪೊಲೀಸರೂ ಹೀಗೇ ಅಂತಲ್ಲ. ಆದರೆ ಕೆಲವರು ಪೊಲೀಸ್ ಪದವಿಗೇ ನಾಚಿಕೆಯಾಗುವಂತೆ ನಡೆದುಕೊಳ್ಳುತ್ತಾರೆ. ಅಂತಹದ್ದೇ ಘಟನೆಯಿದು. ಉತ್ತರ ಪ್ರದೇಶದ ಅಮ್ರೋಹದಲ್ಲಿ ಬೀದಿ ಬದಿಯಲ್ಲಿ ಎಳೆನೀರು ವ್ಯಾಪಾರ ಮಾಡುವ ವ್ಯಾಪಾರಿ ಎಂದಿನಂತೆ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದ. ಅಲ್ಲಿಗೆ ಬಂದ ಅಮ್ರೋಹ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆ ಎಳೆನೀರು ವ್ಯಾಪಾರಿಗೆ ಹೊಡೆದಿದ್ದಾರೆ. ಅಷ್ಟೇ ಅಲ್ಲ, ಆತನ ಬಳಿಯಿದ್ದ ಎಲ್ಲಾ ಎಳೆನೀರನ್ನು ತನ್ನ ಕೈಕೆಳಗಿನ ಅಧಿಕಾರಿಗಳಿಂದ ಖಾಸಗಿ ವಾಹನಕ್ಕೆ ತುಂಬಿ ಜಾಗ ಖಾಲಿ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪೊಲೀಸರ ವರ್ತನೆಗೆ ಜನ ಛೀಮಾರಿ ಹಾಕಿದ್ದಾರೆ.

Share News

About BigTv News

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *