ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ ಅವರು ಭಾರತದ ಅತ್ಯಂತ ಯಶಸ್ವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. 83 ವರ್ಷ ವಯಸ್ಸಿನ ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರಾಗಿ ಅವರ ಕೆಲಸ ಮತ್ತು ಅವರ ಅಸಾಮಾನ್ಯ ದಯೆ, ಶಾಂತ ಸ್ವಭಾವಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. ರತನ್ ಟಾಟಾ ಅವರು ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ಜನಿಸಿದರು ಮತ್ತು ಅವರ ತಂದೆ ನೇವಲ್ ಟಾಟಾ ಆಗಿದ್ದಾರೆ. ತಾಯಿ ಸೂನಿ ಟಾಟಾ ಆಗಿದ್ದಾರೆ. ಟಾಟಾ ಅವರ ಪೋಷಕರಾದ ನೇವಲ್ ಮತ್ತು ಸೋನೂ ಅವರು 1948 ರಲ್ಲಿ ಕೇವಲ 10 ವರ್ಷ ವಯಸ್ಸಿನವರಾಗಿದ್ದಾಗ ಬೇರೆ ಬೇರೆಯಾಗಿದ್ದಾರೆ.
ಜಮ್ಸೆಟ್ಜಿ ಟಾಟಾ ರತನ್ ಟಾಟಾ ಮುತ್ತಾತ ಆಗಿದ್ದಾರೆ. ರತಂಜಿ ಟಾಟಾ ಅಜ್ಜ ಆಗಿದ್ದಾರೆ. ಸಿಮಾನ್ ಟಾಟಾ ಮಲ ತಾಯಿ ಆಗಿದ್ದಾರೆ. ನಿಯೋಲ್ ಟಾಟಾ ಮಲ ಸಹೋದರ ಆಗಿದ್ದಾರೆ. ಆದರೆ ನಾವು ರತನ್ ಟಾಟಾರ ಪತ್ನಿಯ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿಲ್ಲ. ಅದಕ್ಕೆ ಮುಖ್ಯ ಕಾರಣ ರತನ್ ಟಾಟಾ ವಿವಾಹವಾಗಿಲ್ಲ. ಆದರೆ ರತನ್ ಟಾಟಾ ಪ್ರೀತಿಯ ಬಲೆಗೆ ಬಿದ್ದಿರುವುದು ನಿಜ!
bigtvnews | Hubli Dharwad News | Kannada News | Karnataka News Hubli News | News In Hubli | Local news





