Breaking News

ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದ ಯುವಕ

ನವಲಗುಂದ: ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ನವಲಗುಂದ ತಾಲೂಕಿನ ಹನಸಿ ಗ್ರಾಮದ ಬಸವರಾಜ ವಡ್ಡರ ಅವರು 80 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿ ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾರತ ದೇಶದ ಪರವಾಗಿ 80 ಕೆಜಿ ವಿಭಾಗದ 30 ವರ್ಷ ವಯಸ್ಸಿನ ಒಳಗಿನ ಕುಸ್ತಿ ಪಂದ್ಯಾವಳಿಯಲ್ಲಿ ಬಂಗಾರದ ಪದಕವನ್ನು ಗೆದ್ದು ದೇಶದ, ನಾಡಿನ ಹಿರೇಮೆ ಜೊತೆಗೆ ರೈತ ಬಂಡಾಯ ನಾಡಿನ ಕೀರ್ತಿ ಪತಾಕಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ.

ಅಂಜುಮನ್‌ ಕಾಲೇಜಿನಲ್ಲಿ ಕಾಲೇಜನ ಚೇರ್ಮನ್ ಅಧ್ಯಕ್ಷತೆಯಲ್ಲಿ ಯುವ ಕ್ರೀಡಾಪಟು ವಿಜೇತರಾದ ಬಸವರಾಜ ಸುಭಾಷ ವಡ್ಡರ ಕುಸ್ತಿಪಟುವಿಗೆ ನವಲಗುಂದದ ಮಾಜಿ ಪೈಲ್ವಾನರಾದ ಬಡೇಸಾಹೇಬ ದೇವರಿಡು ಹಾಗೂ ಶಿಕ್ಷಕರಾದ ಮೈನುದ್ದಿನ್ ದೇವರಿಡು ಮತ್ತು ಅಂಜುಮನ್‌ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಕುಸ್ತಿಪಟು ಕೆಂಪಣ್ಣ ಮರಕುಂಬಿ ಸೇರಿ ಸನ್ಮಾನ ಮಾಡಿದರು.

Share News

About Shaikh BigTv

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *