
ಹುಬ್ಬಳ್ಳಿ : ಉತ್ತರ ಕರ್ನಾಟಕ ವಿಕಾಸ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಹುಬ್ಬಳ್ಳಿಯ ವಿದ್ಯಾನಗರದ ಹನ್ಸ್ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.
ಸಭೆಯ ಉದ್ಘಾಟಕರಾಗಿ ಶ್ರೀ ಕ್ಷೇತ್ರ ದ್ವಾರಪೂರದ ಶ್ರೀ ಪರಮಾತ್ಮಾಜಿ ಮಹಾರಾಜರು ಆಗಮಿಸಿದ್ದರು.ಅಧ್ಯಕ್ಷರಾಗಿ ಶ್ರೀ ವಿನಾಯಕ ಮಾಲಕದರ ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಲಕ್ಣ್ಮಣ ಮೊರಬ ಹಾಗು ಹಿಂದೂ ಪರಿಷದ್ ಮಹಿಳಾ ಘಟಕದ ರಾಜ್ಯಾದ್ಯಕ್ಷರಾದ ಲಕ್ಷ್ಮಿ ಹೊಸಮನಿ ವಹಿಸಿಕೊಂಡಿದ್ದರು.
ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪರಮಾತ್ಮಾಜಿ ಮಹಾರಾಜರು ಇಂದಿನ ದಿನಗಳಲ್ಲಿ ಹಿಂದೂಗಳಿಗೆ ಅಧಿಕಾರ ಬಲ ಕೊಡಬೇಕು ಅಧಿಕಾರದ ಬಲ ಕೊಟ್ಟಾಗ ಮಾತ್ರ ನಾವು ನಮ್ಮನ್ನು ಏನು ಬೇಕಾದರೂ ಮಾಡಬಹುದು.ಭಗವಂತ ನಮ್ಮನ್ನು ಸೈನಿಕರಾಗಿ ಈ ಭೂಮಿಗೆ ಕಳುಹಿಸಿದ್ದಾನೆ ನೀನು ಎಚ್ಚೆತ್ತುಕೊಳ್ಳಬೇಕು ಉಳಿದವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡವುದು ನಮ್ಮೆಲ್ಲರ ಕರ್ತವ್ಯ ಎಂದರು.ಕರ್ನಾಟಕ ವಿಕಾಸ ಪಾರ್ಟಿ ಯಶಸ್ವಿಯಾಗಿ ಬೆಳೆಯಲಿ ಎಂದು ಹಾರೈಸಿದರು. ಈ ವೇಳೆ ಪಾರ್ಟಿಯ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





