Breaking News

ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆ ಸಮಯದಲ್ಲಿ ದುರಂತ….

ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆ ಸಮಯದಲ್ಲಿ ದುರಂತ ಸಂಭವಿಸಿದೆ. ಪ್ರಭಾಸ್ ಅಭಿಮಾನಿಯೊಬ್ಬ ವಿದ್ಯುತ್ ತಗುಲಿ ಕೊನೆಯುಸಿರೆಳೆದಿರುವ ಘಟನೆ ವರದಿಯಾಗಿದೆ. ಆಂಧ್ರದ ಧರ್ಮಾವರಂನಲ್ಲಿ ಈ ಘಟನೆ ಸಂಭವಿಸಿದೆ. ‘ಸಲಾರ್‌’ ಚಿತ್ರದ ಫ್ಲೆಕ್ಸ್ ಕಟ್ಟಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ಬಾಲರಾಜು(29) ಎಂಬ ಅಭಿಮಾನಿ ಅಸುನೀಗಿದ್ದಾನೆ.

ಶ್ರೀಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದಲ್ಲಿ ರಂಗಾ ಸಿನಿ ಕಾಂಪ್ಲೆಕ್ಸ್ ಎದುರು ಮನೆಯೊಂದರ ಮೇಲೆ ಬಾಲರಾಜು ಚಿತ್ರದ ಬ್ಯಾನರ್ ಕಟ್ಟಲು ಏರಿದ್ದ. ‘ಸಲಾರ್’ ಸಿನಿಮಾ ಬಿಡುಗಡೆ ಹಿನ್ನೆಲೆ ಅನಂತಪುರದ ತಪೋವನ ಮೂಲದ ಬಾಲರಾಜು ಹಾಗೂ ಆತನ ಗೆಳೆಯರು ಫ್ಲೆಕ್ಸಿ ಫ್ರೇಂ ಮಾಡಿಸಿ ಕಟ್ಟುತ್ತಿದ್ದರು. ಈ ವೇಳೆ ಸಂದರ್ಭ ಮನೆಯ ಮೇಲಿದ್ದ ವಿದ್ಯುತ್‌ ತಂತಿಗೆ ಫ್ರೇಮಿನ ಕಬ್ಬಿಣದ ರಾಡ್‌ ತಾಗಿ ಬಾಲರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೇ ವೇಳೆ ವಿದ್ಯುತ್ ಶಾಕ್‌ನಿಂದ ಗಜೇಂದ್ರ ಎಂಬ ಮತ್ತೊಬ್ಬ ಯುವಕ ಗಾಯಗೊಂಡಿದ್ದಾನೆ. ಇನ್ನು ನಾಲ್ವರು ಯುವಕರು ಅಪಘಾತದಲ್ಲಿ ಪಾರಾಗಿದ್ದಾರೆ.

ತಪೋವನ ಮೂಲದ ಬಾಲರಾಜು ಕನಗಾನಪಲ್ಲಿ ಮಂಡಲದ ಮಾಮಿಲ್ಲಪಲ್ಲಿಯಲ್ಲಿ ಕೆಲ ದಿನಗಳಿಂದ ಸಣ್ಣ ವ್ಯಾಪಾರ ಮಾಡಿಕೊಂಡು ವಾಸವಾಗಿದ್ದ. ಸಲಾರ್ ಸಿನಿಮಾ ರಿಲೀಸ್ ಹಿನ್ನೆಲೆ ಬಾಲರಾಜು, ಸ್ನೇಹಿತರ ಜೊತೆ ಅನಂತಪುರದಿಂದ ಧರ್ಮಾವರಕ್ಕೆ ಬಂದಿದ್ದ. ಬಾಲರಾಜು ಪತ್ನಿ ಸಿರಿಶಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಧರ್ಮವರಂ ಒನ್ ಟೌನ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *