Breaking News

ಸೋಮವಾರ ಉತ್ತರ ಮಧ್ಯ ಜಪಾನ್‌ ಅಧಿಕ ತೀವ್ರತೆಯ ಭೂಕಂಪ ಸಂಭವಿಸಿದೆ…..

ನವದೆಹಲಿ: ತಂತ್ರಜ್ಞಾನದಲ್ಲಿ ಸದಾ ಸುದ್ದಿ ಮಾಡುವ ಜಪಾನ್ ದೇಶದಲ್ಲಿ ಮತ್ತೆ ಸುನಾಮಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇದರ ಭಾಗವೆಂಬಂತೆ ಸೋಮವಾರ ಉತ್ತರ ಮಧ್ಯ ಜಪಾನ್‌ ಅಧಿಕ ತೀವ್ರತೆಯ ಭೂಕಂಪ ಸಂಭವಿಸಿದೆ. ಜಪಾನ್‌ನ ಉತ್ತರ ಮಧ್ಯ ಭಾಗದಲ್ಲಿ ಸೋಮವಾರ ಬೆಳಗ್ಗೆ 7.6ರ ಪ್ರಾಥಮಿಕ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿ ಆಗಿದೆ. ಇಲ್ಲಿನ ಇಶಿಕಾವಾ, ನಿಗಾಟಾ ಹಾಗೂ ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಪಶ್ಚಿಮ ಪ್ರದೇಶಗಳಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದೆ. ಇದರ ಬೆನ್ನಲ್ಲೆ ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆ ನೀಡಿದೆ. ಇನ್ನೂ ಜಪಾನ್‌ನ ಹೊಕುರಿಕು ಎಲೆಕ್ಟ್ರಿಕ್ ಪವರ್ ತನ್ನ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ತೊಂದರೆಗಳು ಆಗಿವೆಯೇ? ಎಂದು ಪರಿಶೀಲನೆ ನಡೆಸಿದೆ ಎಂದು ಎನ್‌ಎಚ್‌ಕೆ ಸುದ್ದಿ ಸಂಸ್ಥೆ ವರದಿ ಮಾಡಿದೆ.

Share News

About BigTv News

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *