Breaking News

18 ಕೋಟಿ ಹಣವನ್ನು ಹುಬ್ಬಳ್ಳಿಗೆ ತಂದ ಐಟಿ ಅಧಿಕಾರಿಗಳು: ಐಟಿ ಖಾತೆಗೆ ಜಮಾ..!

ಹುಬ್ಬಳ್ಳಿ: ಧಾರವಾಡದಲ್ಲಿ ನಡೆದ ಭರ್ಜರಿ ಐಟಿ‌ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪ್ತಿ ಮಾಡಿದ 18 ಕೋಟಿ ಹಣ ಹುಬ್ಬಳ್ಳಿಗೆ ತಂದ ಐಟಿ‌ ಅಧಿಕಾರಿಗಳು, ಹುಬ್ಬಳ್ಳಿಯ ಕೇಶ್ವಾಪುರದ SBI ಬ್ಯಾಂಕ್ ಪ್ರಾದೇಶಿಕ‌ ಕಚೇರಿಗೆ ತಂದಿದ್ದು, ಬ್ಯಾಂಕ್ ಅಧಿಕಾರಿಗಳ ನೇತೃತ್ವದಲ್ಲಿ ಜಮಾ ಮಾಡಿದ್ದಾರೆ.

ಹುಬ್ಬಳ್ಳಿಯ ಕೇಶ್ವಾಪುರದ SBI ಶಾಖೆಯ ಐಟಿ ಖಾತೆಗೆ ಜಮೆ ಮಾಡುವ ಕಾರ್ಯಾಚರಣೆಗೆ ಮುಂದಾಗಿದ್ದು, ಯು.ಬಿ ಶೆಟ್ಟಿಗೆ ಸೇರಿದ‌ ಹಣವನ್ನು ಸೀಜ್ ಮಾಡಿರುವ ಅಧಿಕಾರಿಗಳು ಬಿಗಿ ಬಂದೋಬಸ್ತ್ ಮೂಲಕ ಹುಬ್ಬಳ್ಳಿಗೆ ತಂದಿದ್ದಾರೆ.ಯು.ಬಿ ಶೆಟ್ಟಿ ಕಚೇರಿಯ ಅಕೌಂಟೆಂಟ್ ಬಸವರಾಜ ಮನೆಯಲ್ಲಿ ಸಂಗ್ರಹಿಸಿದ್ದ ಅಕ್ರಮ ಹಣದ ಬಗ್ಗೆ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಆರೋಪ ಕೇಳಿ ಬಂದಿದೆ. ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಚುನಾವಣೆಗೆ ಮೀಸಲಿಟ್ಟಿದ್ದ ಹಣ ಎನ್ನಲಾಗುತ್ತಿದ್ದು, ಅಧಿಕಾರಿಗಳು ಖಚಿತ ಪಡಿಸಿದ ಮೇಲೆಯೇ ಸಂಪೂರ್ಣ ಮಾಹಿತಿ ಲಭ್ಯವಾಗಬೇಕಿದೆ.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *