ಹುಬ್ಬಳ್ಳಿ : ಸೆಂಟ್ರಲ್ ಕ್ಷೇತ್ರದ ಹಿಡಿತಕ್ಕೆ ಹಾತೊರೆಯುತ್ತಿರುವ ಅಬ್ಬಯ್ಯ: ರಜತ್ ವಿರುದ್ಧ ಷಡ್ಯಂತ್ರ..? ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಪಾರ್ಟಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಇಂದು ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆ ನಡೆಸಿ ನೇರವಾಗಿ ಅಲ್ಲಿಯ ಮುಂದಾಳತ್ವ ವಹಿಸಲು ಹೊರಟಿದ್ದ ನಾಯಕರ ಮೇಲೆ ಕೆಂಡ ಕಾರಿದ್ದಾರೆ ಅಲ್ಲದೆ .ಹುಬ್ಬಳ್ಳಿ ಧಾರವಾಡ ನಗರದ ಸೆಂಟ್ರಲ್ ಹಾಗು ಪಶ್ಚಿಮ ಕ್ಷೇತ್ರದ ಹಿಡಿತಕ್ಕೆ ಮತ್ತೊಮ್ಮೆ ಈಗ ಗಾಳ ಹಾಕಿರುವುದು ಕಂಡು ಬಂದಿದೆ.ಈ ದಿನ ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಶಾಸಕ ಅಬ್ಬಯ್ಯ ಮಾತನಾಡಿ ಸೆಂಟ್ರಲ್ ಕ್ಷೇತ್ರದಲ್ಲಿ ಯಾರು ಸದ್ಯಕ್ಕೆ ನಾಯಕರಿಲ್ಲ. ಡಿಕೆ ಶಿವಕುಮಾರ್ ಹೆಸರು ಹೇಳಿಕೊಂಡು ಕೆಲಸ ಮಾಡುವವರನ್ನು ನಂಬಬೇಡಿ ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸುವ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ.ಸಭೆಯ ಉದ್ದಕ್ಕೂ

ಲಿಂಗಾಯತ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ ಅಲ್ಲದೆ ಮುಂದಿನ ದಿನಗಳಲ್ಲಿ ಸೆಂಟ್ರಲ್ ಕ್ಷೇತ್ರದ ಸಾಂಪ್ರದಾಯಕ ಲಾಭಕ್ಕೆ ನಾನು ಮೊದಲಿಗ ಎನ್ನುವ ಸಂದೇಶ ಕೂಡ ಇಲ್ಲಿ ಶಾಸಕರು ನೀಡಿದ್ದಾರೆ ಇಂದು ಬಣ್ಣಿಸಲಾಗುತ್ತಿದೆ.ಇನ್ನು ಈ ಹಿಂದೆ ಶೆಟ್ಟರ್ ರಾಜಿನಾಮೆ ನೀಡಿದ ಸಂದರ್ಭದಲ್ಲಿ ಪೊಲೀಸ್ ಟ್ರಾನ್ಸಫರ್ ವಿಚಾರವಾಗಿ ಸೆಂಟ್ರಲ್ ಹಾಗು ಪಶ್ಚಿಮ ಕ್ಷೇತ್ರದಲ್ಲಿ ಅಬ್ಬಯ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಜತ್ ಉಳ್ಳಾಗಡ್ಡಿಮಠ ಹಾಗೂ ದೀಪಕ್ ಚಿಂಚೋರ್ ಆಕ್ರೋಶ ಗೊಂಡಿದ್ದರು.ಈ ಸಮಯದಲ್ಲಿ ಕೆಲವು ಅಧಿಕಾರಿಗಳು ಇಕ್ಕಟ್ಟಿಗೆ ಕೂಡ ಸಿಲುಕಿದ್ದರು ಎನ್ನುವುದು ಸತ್ಯ ಇನ್ನು ಮುಂದುವರೆದು ಇದೀಗ ಲೋಕಸಭೆ ಚುನಾವಣೆಯ ಕಾಂಚಾಣ ಲೆಕ್ಕಾಚಾರ ಶುರುವಾಗುತ್ತಿದ್ದಂತೆ ಇದೀಗ ಮತ್ತೆ ಶಾಸಕ ಅಬ್ಬಯ್ಯ ರಜತ್ ವಿರುದ್ಧ ಮಾತನಾಡಲು ಶುರು ಮಾಡಿದ್ದು.ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಶಾಸಕರಿಂದ ಕಂಟ್ರೋಲ್ ಪಡೆಯುವ ಪರ್ವ ಶುರುವಾಗಿದೆ ಎನ್ನಬಹುದು
bigtvnews | Hubli Dharwad News | Kannada News | Karnataka News Hubli News | News In Hubli | Local news

