Breaking News
Featured Video Play Icon

ಹುಬ್ಬಳ್ಳಿಯ ಎರಡು ಕೊಲೆಗೆ ಸರ್ಕಾರವೇ ಕಾರಣ, ಪೊಲೀಸ್ ಸ್ಟೇಷನ್ ಮುಚ್ಚಿಬಿಡಿ: ರವಿಕುಮಾರ್..

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆಯಾಗಿರೋದು ಕಾಡಿನಲ್ಲಿ ಅಲ್ಲ. ಜನನಿಬಿಡ ಪ್ರದೇಶದಲ್ಲಿ ಆಗಿದೆ. ಅಂತಹ ಕೊಲೆ ಬಗ್ಗೆ ಸರ್ಕಾರ ಬೇಜಾವ್ದಾರಿಯಾಗಿ ವರ್ತನೆ ಮಾಡಿದೆ. ಇದು ಅಸಮರ್ಥ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.

ಅಂಜಲಿ ಮನೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೇಹಾ ಹಿರೇಮಠ ‌ಕೊಲೆಯಾಗಿ ಒಂದು ವರ್ಷ ಆಗಿಲ್ಲ. ಮತ್ತೆ ಅಂತಹದೇ ಹತ್ಯೆಯಾಗಿದೆ ಅಂದ್ರೆ ಸರ್ಕಾರ ಸತ್ತಿದೆಯೋ ಬದುಕಿದೆಯೋ.ಎರಡು ಹತ್ಯೆಗೆ ಸರ್ಕಾರ ನೇರ ಹೊಣೆ. ಪೊಲೀಸರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಜ್ಜಿ ಹೋದ್ರೆ ನೀವು FIR ಮಾಡಲ್ಲ ಅಂದ್ರೆ ಪೊಲೀಸ್ ಸ್ಟೇಷನ್ ಯಾಕೆ ಮುಚ್ಚಿ ಬಿಡಿ. ಇದು ರಣ ಹೇಡಿ ಸರ್ಕಾರ,ಕೊಲೆ ಪಾತಕರನ್ನು ರಕ್ಷಣೆ ‌ಮಾಡೋ ಸರ್ಕಾರ. ಸಂತೋಷ್ ಲಾಡ್,ಅಬ್ಬಯ್ಯ ಗೆ ಇಲ್ಲಿಗೆ ಬರೋಕೆ ಮುಖ ಇದೆಯಾ. ಉದ್ದುದ್ದ ಲಾಡ್ ಮಾತಾಡ್ತಾರೆ ಇಲ್ಲಿ ಏನ ಆಗಿದೆ.‌ ಅಂಜಲಿ ಮನೆಯವರಿಗೆ ಸರ್ಕಾರಿ ನೌಕರಿ ಕೊಡಬೇಕು. ಅವರ ಮನೆಯವರಿಗೆ 50 ಲಕ್ಷ ಪರಿಹಾರ ಕೊಡಬೇಕು. ಸ್ವಂತ ಮನೆ ಕೊಡಬೇಕು. ಅಕಸ್ಮಾತ್ ಕೊಡದೆ ಹೋದ್ರೆ ಬೆಂಗಳೂರಲ್ಲಿ ಪ್ರತಿಭಟನೆ ‌ಮಾಡ್ತೀವಿ ಎಂದು ಅವರು ಎಚ್ಚರಿಕೆ ನೀಡಿದರು.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *