ಮೈಸೂರು: ಚಿಕ್ಕ ವಯಸ್ಸಿನಲ್ಲಿ ಮೌಢ್ಯಕ್ಕೆ ಮಾರು ಹೋದವ್ರು ಚೆಡ್ಡಿ ದೊಸ್ತ್ ಅನ್ನೇ ಬಲಿ ಪಡೆದಿರುವ ಘಟನೆ ಮೈಸೂರುನಲ್ಲಿ ನಡೆದಿದೆ.
ಅವ್ರೆಲ್ಲ ಒಂದೇ ಊರಿನ ಚೆಡ್ಡಿದೋಸ್ತ್ ಗಳು . ಇನ್ನೂ ಮೀಸೆ ಚಿಗುರದಿದ್ರೂ ಅವ್ರು ಮಾಡೋ ಕೆಲ್ಸ ಮಾತ್ರ ಭಯ ಹುಟ್ಟಿಸುವಂತದ್ದು. ಸ್ನೇಹಿತರು ಕರಿತಿದ್ದಾರೆ ಅಂತಾ ಹಿಂದೆ ಮುಂದೆ ಯೋಚನೆ ಮಾಡದೆ ಸ್ನೇಹಿತರೊಟ್ಟಿಗೆ ಹೋದ ಆ ಬಾಲಕ ಸಾವಿನ ಮನೆ ಸೇರಿದ್ದಾನೆ.
ವಾಮಾಚಾರ ಮಾಡಿರೋ ಅಸಾಮಿಗಳ್ಯಾರು ಜ್ಯೋತಿಷಿಗಳಲ್ಲ ಬದಲಿಗೆ ಇನ್ನೂ ಚಿಗುರು ಮೀಸೆಯೂ ಬಾರದ ಎಸ್ ಎಸ್ ಎಲ್ ಸಿ ಯುವಕರು. ಅಂದಹಾಗೆ ಒಂದೇ ಊರಿನ ಚಡ್ಡಿ ದೋಸ್ತ್ ಗಳು ಮಾಡಿದ ಖತರ್ನಾಕ್ ಕೆಲ್ಸಕ್ಕೆ ಏನೂ ಅರಿಯದ ಬಾಲಕ ಬಲಿಯಾಗಿದ್ದಾನೆ. ಘಟನೆ ನಡೆದಿರೋದು ಜ.2 ರಂದು ನಂಜನಗೂಡು ತಾಲೂಕಿನ ಹಳೆಪುರ ಗ್ರಾಮದ ಮಹೇಶ್ ಅಲಿಯಾಸ್ ಮನು(16) ಬಲಿಯಾಗಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

