Breaking News
Featured Video Play Icon

ಬಸವಣ್ಣ, ಅಂಬಿಗರ ಚೌಡಯ್ಯನವರ ನಾಡಿನಲ್ಲಿ ನಡೆದ ಅಮಾನವೀಯ ಕೃತ್ಯಕ್ಕೆ ಪೊಲೀಸ್ ನಿರ್ಲಕ್ಷ್ಯ ಕಾರಣ..!

ಹುಬ್ಬಳ್ಳಿ: ಬಸವಣ್ಣನವರ, ಅಂಬಿಗರ ಚೌಡಯ್ಯನ ಈ‌ ನಾಡಿನಲ್ಲಿ ಇಂತಹ ಕೃತ್ಯ ನಡೆದಿದೆ. ನೇಹಾ ಹತ್ಯೆ ಬಳಿಕ‌ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಈ‌ ಕೃತ್ಯ ನಡೆಯುವ ಮುಂಚೆಯೇ ಆತನಿಂದ ಬೆದರಿಕೆ‌ ಬಂದಿತ್ತು. ಆದ್ರೆ ಈ ವಿಚಾರದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ನೇರವಾಗಿ ಪೊಲೀಸ್ ಇಲಾಖೆಯೇ ಕಾರಣ ಎಂದು ಅಂಬಿಗರ ಚೌಡಯ್ಯನ ಗುರುಪೀಠದ ಶಾಂತ ಭೀಷ್ಮ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.ಅಂಜಲಿ ನಿವಾಸದ ಮುಂದೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೇಹಾ ಹತ್ಯೆಗೂ ನ್ಯಾಯ ಸಿಗಬೇಕು.ಅಂಜಲಿ‌ ಹತ್ಯೆಗೂ ನ್ಯಾಯ ಸಿಗಬೇಕು. ನೇಹಾ ಪ್ರಕರಣದಂತೆಯೇ ಈ‌ ಪ್ರಕರಣದ ಕುರಿತು ತ್ವರಿತ ನ್ಯಾಯಾಲಯ ತೆರೆಯಬೇಕು. ಶೀಘ್ರವೇ ಈ‌ ಪ್ರಕರಣದಲ್ಲಿ ಅಂಜಲಿ‌ ಸಾವಿಗೆ ನ್ಯಾಯ ಸಿಗಬೇಕು. ಅಂಜಲಿ‌ ಕುಟುಂಬಕ್ಕೆ‌ ಆರ್ಥಿಕ‌ ನೆರವಿನ ಜೊತೆಗೆ ಸೂರು‌ ಕಲ್ಪಿಸಬೇಕು ಎಂದರು.ಅಂಜಲಿ‌ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು‌. ಈ‌ ನಿಟ್ಟಿನಲ್ಲಿ ನಾಳೆ ನಮ್ಮ‌ಸಮಾಜದಿಂದ‌ ಉಗ್ರ ಹೋರಾಟ ನಡೆಸಲಿದ್ದೇವೆ. ನಾಳೆ ಬೆಳಿಗ್ಗೆ 10.30 ಕ್ಕೆ ಅಂಜಲಿ‌ ಮನೆಯಿಂದ‌ ಚೆನ್ನಮ್ಮ‌ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ. ಬೃಹತ್ ಮಟ್ಟದಲ್ಲಿ ಈ‌ ಹೋರಾಟದಲ್ಲಿ ಅಂಬಿಗರ ಸಮಾಜದ ನೂರಾರು ಜನರ ನೇತೃತ್ವದಲ್ಲಿ‌ ಪ್ರತಿಭಟನೆ ನಡೆಸಲಿದ್ದೇವೆ. ಪ್ರತಿಭಟನೆ ಮೂಲಕ‌ ರಾಜ್ಯ ಸರ್ಕಾರ ಹಾಗೂ ಸಿಎಂಗೆ ಮನವಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.

Share News

About Shaikh BigTv

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *