Breaking News

ವೈದ್ಯಕೀಯ ಸೀಟು ಕೊಡಿಸುವ ನೆಪದಲ್ಲಿ 18 ಲಕ್ಷ ರೂ. ವಂಚನೆ

ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ 18 ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ 2ನೇ ವಾರ್ಡ್ ವಿಜಯ ವಿಠಲ ನಗರದ ನಿವಾಸಿ ಬೆಟ್ಟಪ್ಪ ಗೌಡ ವಂಚನೆಗೆ ಒಳಗಾದವರು.ತಮ್ಮ ಸ್ನೇಹಿತ ವೀರಭದ್ರ ಗೌಡ ಎಂಬುವರು ರೆಡ್ಡಿತಿಮ್ಮಾರೆಡ್ಡಿ ಎಂಬಾತನನ್ನು ಪರಿಚಯಿಸಿ, ಇವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ಉನ್ನತ ಮಟ್ಟದ ಪ್ರಭಾವ ಇದೆ ಎಂದು ನಂಬಿಸಿದ್ದಾರೆ.ಇದನ್ನು ನಂಬಿ ಬೆಟ್ಟಪ್ಪ ಗೌಡ ತನ್ನ ಮತ್ತೊಬ್ಬ ಸ್ನೇಹಿತ ಜಗದೀಶ ಕೋರಿ ಎಂಬುವವರ ಮಗಳಿಗೆ ವೈದ್ಯಕೀಯ ಸೀಟು ಕೊಡಿಸಲು ಮುಂದಾಗಿ ಜೂ.17 ರಂದು 10 ಲಕ್ಷ ರೂ. ಹಾಗೂ ಸೆ.16ರಂದು 8 ಲಕ್ಷ ರೂ. ಸೇರಿ ಒಟ್ಟು 18 ಲಕ್ಷ ರೂ.ವನ್ನು ನೀಡಿದ್ದಾರೆ. ಆದರೆ, ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಹೆಸರು ಬಾರದಿದ್ದಕ್ಕೆ ವಂಚನೆ ಗೊತ್ತಾಗಿದೆ. ಬಳಿಕ ತಿಮ್ಮಾರೆಡ್ಡಿ ಕೊಪ್ಪಳದ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಎಂದು ಗೊತ್ತಾಗಿದ್ದು, ಸಿರುಗುಪ್ಪ ಠಾಣೆಯಲ್ಲಿ ರೆಡ್ಡಿ ತಿಮ್ಮಾರೆಡ್ಡಿ, ಹಾಗೂ ವೀರಭದ್ರಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Share News

About BigTv News

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *