ಧಾರವಾಡ: ರಂಗಾಯಣಕ್ಕೆ ಇದೀಗ ನೂತನ ನಿರ್ದೇಶಕರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕಲಿಯುಗದ ಕುಡುಕ ನಾಟಕ ಖ್ಯಾತಿಯ ಹಾಗೂ ಹಲವು ಚಲನಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ ರಾಜು ತಾಳಿಕೋಟೆ ಅವರನ್ನು ಧಾರವಾಡ ರಂಗಾಯಣದ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ವಿಧಾನಸಭಾ ಚುನಾವಣೆಯ ನಂತರ ತೆರವಾಗಿದ್ದ ಧಾರವಾಡ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಒಂದು ವರ್ಷದ ನಂತರ ನಿರ್ದೇಶಕರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

