Breaking News

ಪ್ರೀತಿಸಿದ ಪ್ರಮೇಗಳಿಗೆ ಅಡ್ಡಿಯಾದ ಜಾತಿ

ಧಾರವಾಡ: ಪರಸ್ಪರ ಪ್ರೀತಿ ಮಾಡಿದ ಜೋಡಿ ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ರಕ್ಷಣೆಗೆ ಖಾಕಿಪಡೆಗೆ ಅಂಗಲಾಚಿದ್ದಾರೆ.

ಧಾರವಾಡ ಮೂಲದ ಯುವಕ ಹಾಗೂ ಹಾವೇರಿ ಮೂಲದ ಯುವತಿ ನಡುವೆ ಕಳೆದ 6 ವರ್ಷಗಳ ಹಿಂದೆಯೇ ಪ್ರೇಮಾಂಕುರವಾಗಿತ್ತು. ಯುವಕ ಶಂಭು ಮನೆಯಲ್ಲಿ ಬಾಡಿಗೆ ಇದ್ದ ಯುವತಿ ಶಾಲಿನಿ ಅಲ್ಲಿಯೇ ಕೆಲ ವರ್ಷ ವಾಸವಿದ್ದರು. ಹೀಗಾಗಿ ಇವರಿಬ್ಬರ ನಡುವೆ ಆಗಲೇ ಪ್ರೇಮ ಚಿಗುರೊಡೆದಿತ್ತು. ಇದನ್ನು ಮನೆಯವರ ಜೊತೆ ಚರ್ಚೆ ಮಾಡಿದಾಗ, ಇಬ್ಬರ ಜಾತಿ ಬೇರೆ ಬೇರೆ ಆದ ಕಾರಣಕ್ಕೆ ಯುವತಿಯ ಮನೆಯಲ್ಲಿ ಇವರಿಬ್ಬರ ಪ್ರೀತಿಗೆ ಪೋಷಕರೇ ಒಪ್ಪಲಿಲ್ಲ. ಸದ್ಯ ಯುವತಿ ಶಾಲಿನಿಗೆ ಬೇರೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದರೂ ಸಹ ಒಪ್ಪದ ಮನೆಯವರು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ರು. ಹೀಗಾಗಿ ಶಾಲಿನಿ ಇದೀಗ ಮನೆ ಬಿಟ್ಟು ಬಂದು ಧಾರವಾಡದ ಶಂಭು ಜೊತೆಗೆ ಮದುವೆ ಆಗಿದ್ದಾರೆ.

ಯುವಕ ಶಂಭು ಮನೆಯಲ್ಲಿ ಶಾಲಿನಿ ಬಾಡಿಗೆ ಇದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮ ಏರ್ಪಟ್ಟಿತ್ತು. ಇದೀಗ ಜೋಡಿಗಳು ಮದುವೆಯಾಗಿದ್ದು, ಯುವತಿ ಮನೆಯವರ ಕಡೆಯಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನವದಂಪತಿ ಧಾರವಾಡದ ಉಪನಗರ ಪೊಲೀಸ್‌ ಠಾಣೆಗೆ ಆಗಮಿಸಿ ತಮಗೆ ರಕ್ಷಣೆ ಕೋರಿದ್ದಾರೆ. ಯುವತಿಯ ಪೋಷಕರಿಂದ ನವ ದಂಪತಿಗೆ ಕೊಲೆ ಬೆದರಿಕೆ ಮಾಡಲಾಗಿದೆ. ಹೀಗಾಗಿ ನಮಗೆ ರಕ್ಷಣೆ ನೀಡಿ ಎಂದು ಪೊಲೀಸರಲ್ಲಿ ದಂಪತಿ ಮನವಿ ಮಾಡಿದ್ದಾರೆ.

Share News

About Shaikh BigTv

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *